ಧಾರವಾಡ: ಶಾಲೆ, ಕಾಲೇಜುಗಳಲ್ಲಿ ಧರ್ಮ ಮುಖ್ಯವಲ್ಲ. ಸಮವಸ್ತ್ರ ಮುಖ್ಯ ಎನ್ನುವಂತದ್ದನ್ನು ಹೈಕೋರ್ಟ್ ಹೇಳಿದೆ. ಹೈಕೋರ್ಟ್‌ನ ಈ ತೀರ್ಪು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನೀಡಿದ ಈ ತೀರ್ಪು ಐತಿಹಾಸಿಕವಾಗಿದೆ. ಇದು ಸಂವಿಧಾನದ ವಿಜಯ. ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿಶೇಷವಾಗಿ ಮುಸ್ಲಿಂ ವಿದ್ಯಾರ್ಥಿಗಳು ಯಾವುದೋ ಸಂಘಟನೆಯ ಮಾತಿಗೆ ಬೆಲೆ ಕೊಟ್ಟು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ಕೆಲವೇ ಕೆಲವು ವಿದ್ಯಾರ್ಥಿಗಳು ದೇಶಾದಾದ್ಯಂತ ಹಿಜಾಬ್ ವಿಷಯವನ್ನು ಸುದ್ದಿ ಮಾಡಿದ್ದರು. ಮೊದಲು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದಿದ್ದಾರೆ.
ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಇದಕ್ಕೆ ಕುಮ್ಮಕ್ಕು ನೀಡಿದ್ದರು. ಕೂಡಲೇ ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಈ ಸಂಘಟನೆಗಳನ್ನು ಬ್ಯಾನ್ ಮಾಡಿಲ್ಲ. ಗೃಹ ಸಚಿವರು ಈ ಇಸ್ಲಾಮಿಕ್ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಡುತ್ತೇವೆ ಎಂದಿದ್ದರು. ಇವರು ಹದ್ದಿನ ಕಣ್ಣಿಟ್ಟಿದ್ದರೆ ಹರ್ಷನ ಕೊಲೆಯಾಗುತ್ತಿರಲಿಲ್ಲ. ಹಿಜಾಬ್ ವಿಷಯ ಬರುತ್ತಿರಲಿಲ್ಲ. ಗೃಹ ಸಚಿವರು ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.
ಧರ್ಮ ಮುಖ್ಯವಲ್ಲ. ಶಿಕ್ಷಣ ಮುಖ್ಯ ಹೀಗಾಗಿ ಶಾಲಾ ಕೊಠಡಿಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ಕೊಟ್ಟಿದೆ. ಈ ಬಗ್ಗೆ ಕೆಲವರು ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ ಎನ್ನುವ ಮಾತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಯಾರು ಎಲ್ಲಿಗೆ ಬೇಕಾದರೂ ಹೋಗಲಿ. ಮೊದಲು ಹೈಕೋರ್ಟ್ ಆದೇಶ ಪಾಲಿಸಲಿ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/03/2022 01:50 pm