ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂಬ ಹಿಂದೂ ಪರ ಸಂಘಟನೆಗಳ ಬೇಡಿಕೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ರಚಿಸಲಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರನ್ನೊಳಗೊಂಡ ಸದನ ಸಮಿತಿಯು ಸಲ್ಲಿಸಲಿರುವ ವರದಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ವರದಿ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ.
ಹೌದು… ಸದನ ಸಮಿತಿಯು ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುತ್ತದೋ ಅಥವಾ ನಿರಾಕರಿಸುತ್ತದೋ ಎಂಬುದು ಕುತೂಹಲದ ಸಂಗತಿಯಾಗಿದೆ. ಈ ಕುತೂಹಲವು ಕೆಲವರಿಗೆ ಆತಂಕದ ಸಂಗತಿಯೂ ಆಗಿದೆ. ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಅವರು ಹೇಳಿರುವಂತೆ ಈ ವಿಷಯದಲ್ಲಿ ಸದನ ಸಮಿತಿಯ ತೀರ್ಮಾನವೇ ಅಂತಿಮವಂತೆ.
ಹಿಂದೂ ಸಂಘಟನೆಗಳಿಗೆ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವುದೋ, ಪಾಲಿಕೆ ವತಿಯಿಂದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದೋ, ಆಚರಣೆಗೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಭಾನುವಾರ ತೆರವು ಮಾಡಿದೆ.
ಐವರು ಸದಸ್ಯರಲ್ಲಿ ಕಾಂಗ್ರೆಸ್ಸಿನ ಇಮಾನ್ ಎಲಿಗಾರ ಹಾಗೂ ನಿರಂಜನ ಹಿರೇಮಠ ಸದನ ಸಮಿತಿಯಿಂದ ದೂರ ಉಳಿದಿದ್ದಾರೆ. ಸಮಿತಿಗೆ ಸಿಕ್ಕ 3 ದಿನಗಳಲ್ಲಿ ಮುಖಂಡರನ್ನು ಐವರು ಸದಸ್ಯರು ಒಟ್ಟಿಗೆ ಸೇರಿ ಒಮ್ಮೆಯೂ ಸಭೆ ನಡೆಸಿಲ್ಲ. ಸಮಿತಿಯಲ್ಲಿ ಜೆಡಿಎಸ್, ಪಕ್ಷೇತರ, ಎಐಎಂಐಎಂ ಪಕ್ಷದ ಸದಸ್ಯರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯೊಂದಿಗೆ ಹೊಸದಾಗಿ ಸಮಿತಿ ರಚಿಸುವಂತೆ ಪಾಲಿಕೆಯ ವಿರೋಧ ಪಕ್ಷದ ನಾಯಕರ ಪರ-ವಿರೋಧ ಮನವಿ ವ್ಯಕ್ತವಾಗಿದೆ.
ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಕೋರಿ ಸದನ ಸಮಿತಿಗೆ ರಾಣಿ ಚನ್ನಮ್ಮ ಗಣೇಶ ಉತ್ಸವ ಸಮಿತಿ, ಹಿಂದುಸ್ತಾನ ಜನತಾ ಪಾರ್ಟಿ, ಹಿಂದೂ ಜಾಗರಣ ವೇದಿಕೆ ಹಾಗೂ ಶ್ರೀ ರಾಮ ಸೇನಾ ಸೇರಿ 8 ಅರ್ಜಿ ಸಲ್ಲಿಕೆಯಾಗಿವೆ. ಅವಕಾಶ ನೀಡಬಾರದೆಂದು ಎಐಎಂಐಎಂ ಪಕ್ಷ ಮನವಿ ನೀಡಿದೆ. ಈ ಮಧ್ಯೆ 3 ದಿನದ ಗಣೇಶೋತ್ಸವ ಆಚರಣೆಗೆ ಪಾಲಿಕೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದನ ಸಮಿತಿ ರಚಿಸಿ ಸೋಮವಾರ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಗಣೇಶ ಹಬ್ಬ ಸಮೀಪಿಸುತ್ತಿರುವಂತೆ ಹಾಗೂ ಸದನ ಸಮಿತಿ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳನ್ನು ತೆರವುಗೊಳಿಸಿ ಎಲ್ಲ 3 ಗೇಟ್‌ಗಳನ್ನು ಬಂದ್ ಮಾಡಲಾಗಿದೆ.
ಸ್ಲಗ್: ಈದ್ಗಾ ಗಣೇಶೋತ್ಸವ: ಅವಕಾಶವೋ? ನಿರಾಕರಣೆಯೋ?
Kshetra Samachara
29/08/2022 03:04 pm