ಧಾರವಾಡ: ಬಂಧನಕ್ಕೊಳಗಾದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ನಿನ್ನೆಯಷ್ಟೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯ ಇಂದು ವೀಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆಗೊಳಪಡಿಸಿತು.
ಆರೋಪಿ ಪರ ವಕೀಲರು ಸಿಬಿಐ ಕಸ್ಟಡಿಗೆ ಏಕೆ ವಹಿಸಬಾರದು ಎಂಬುದರ ಬಗ್ಗೆ ವಾದ ಮಂಡಿಸಿದರು. ಇತ್ತ ಸಿಬಿಐ ಪರ ವಕೀಲರು ಸಿಬಿಐ ಕಸ್ಟಡಿಗೆ ಆರೋಪಿಯನ್ನು ಏಕೆ ನೀಡಬೇಕು ಎಂಬುದರ ಕುರಿತು ವಾದ ಮಂಡಿಸಿದರು. ವಾದ, ಪ್ರತಿವಾದ ಆಲಿಸಿದ ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಪಂಚಾಕ್ಷರಿ ಅವರು ಈ ಪ್ರಕರಣದ ಆದೇಶಕ್ಕಾಗಿ ತೆಗೆದಿರಿಸಿದ್ದಾರೆ.
ಮಧ್ಯಾಹ್ನದ ನಂತರ ಮತ್ತೆ ವೀಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ವಿನಯ್ ಕುಲಕರ್ಣಿ ಅವರು ಸಿಬಿಐ ಕಸ್ಟಡಿಗೆ ಹೋಗುತ್ತಾರಾ ಅಥವಾ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯುತ್ತಾರಾ ಎಂಬುದು ವಿಚಾರಣೆ ನಂತರ ಗೊತ್ತಾಗಲಿದೆ.
ಈಗಾಗಲೇ ಕೊಲೆ ಆರೋಪದಡಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಸಿಬಿಐ 302, 143, 147, 148, 120B ಸೆಕ್ಷನ್ ಅಡಿ ದೂರು ದಾಖಲಿಸಿಕೊಂಡಿದೆ.
Kshetra Samachara
06/11/2020 03:47 pm