ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪೌರ ಕಾರ್ಮಿಕರಿಗೆ ಸಲ್ಲಿತು ಗೌರವ ಆಟೋಟದ ಜೊತೆ ಪ್ರಶಸ್ತಿಯೂ ಬಂತು

ಕುಂದಗೋಳ : ಅಲ್ಲೆಲ್ಲಾ ಕಟ್ಟಿದ ಮಾವಿನ ತಳಿರು ರೋರಣ, ಟೆಂಗಿನ ಗರಿಗಳ ನಡುವೆ ಸ್ವಾಗತ ಕೋರುವ ನಾಮಫಲಕ, ಹಬ್ಬದ ವಾತಾವರಣದ ಕಳೆಯನ್ನು ಪಟ್ಟಣ ಪಂಚಾಯಿತಿಗೆ ತಂದಿದ್ದು ಈ ಪೌರ ಕಾರ್ಮಿಕರ ದಿನಾಚರಣೆ.

ಹೌದು ! ಇಂದು ಕುಂದಗೋಳದ ಪಟ್ಟಣ ಪಂಚಾಯಿತಿ ಕಾರ್ಮಿಕರು ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಯಿತು ಕಲ್ಯಾಣಪುರ ಬಸವಣ್ಣಜ್ಜನವರ ನೇತೃತ್ವದಲ್ಲಿ ಎಲ್ಲ ಪೌರಕಾರ್ಮಿಕರಿಗೆ ಸನ್ಮಾನ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದಲ್ಲದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಕೈಗೆ ಬ್ಯಾಂಡ್ ಕಟ್ಟಿ ಹಣೆಗೆ ತಿಲಕ ವಿಟ್ಟು ಸ್ವಾಗತ ಕೋರಿ ಊಟದ ವ್ಯವಸ್ಥೆ ಮಾಡಿಸಿದರು.

ಬಳಿಕ ಮಾತನಾಡಿದ ಕಲ್ಯಾಣಪುರ ಬಸವಣ್ಣನವರು ಪೌರ ಸೇವೆ ಎಂದಿಗೂ ಅನಂತವಾದುದು ನಮ್ಮೂರು ನಮ್ಮ ಓಣಿ ಚೆನ್ನಾಗಿದೆ ಎಂದರೇ ಅದು ಪೌರ ಕಾರ್ಮಿಕರ ಶ್ರಮ ಎಂದರು. ಪಟ್ಟಣ ಪಂಚಾಯಿತಿ ಸದಸ್ಯರು ಅವರ ಕಾರ್ಯ ಶ್ಲಾಘಿಸಿದರು. ಪೌರ ಕಾರ್ಮಿಕರು ಓಟ, ಕಬಡ್ಡಿ, ಮ್ಯೂಸಿಕ್ ಚೇರ್ ಗೇಮ್ ಆಡಿದರು ಗೆದ್ದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Edited By :
Kshetra Samachara

Kshetra Samachara

24/09/2020 04:32 pm

Cinque Terre

11.48 K

Cinque Terre

0

ಸಂಬಂಧಿತ ಸುದ್ದಿ