ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಸಂತೋಷ್ ಲಾಡ್- ಅಂಗವಿಕರಿಗೂ ಉದ್ಯೋಗ ದೊರಕಿಸಿಕೊಟ್ಟ ಲಾಡ್

ಕಲಘಟಗಿ : ಕಲಘಟಗಿ ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ನಲ್ಲಿ ಇಂದು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಯಿತು. ಸಚಿವ ಸಂತೋಷ್ ಲಾಡ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಒಂದು ಉದ್ಯೋಗ ಮೇಳಕ್ಕೆ ಸುಮಾರು ಐವತ್ತಕ್ಕು ಹೆಚ್ಚು ಕಂಪನಿಗಳು ಆಗಮಿಸಿದ್ದು ವಿಶೇಷವಾಗಿತ್ತು.

ಇನ್ನೊಂದು ವಿಶೇಷವೆಂದರೆ ಈ ಉದ್ಯೋಗ ಮೇಳದಲ್ಲಿ ಸಂತೋಷ ಲಾಡ್ ರವರು ಅಂಗವಿಕಲರಿಗೂ ಅವಕಾಶ ನೀಡಿದ್ದರು. ಈ ಬೃಹತ್ ಉದ್ಯೋಗ ಮೇಳಕ್ಕೆ ಬೇರೆ ಬೇರೆ ಊರುಗಳಿಂದ ಸಾವಿರಾರು ಯುವಕ ಯುವರಿಯರು ಆಗಮಿಸಿ ಈ ಒಂದು ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು .

ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಹಲವಾರು ಯುವಕ ಯುವತಿಯರಿಗೆ ಕಂಪನಿಗಳು ಉದ್ಯೋಗ ಅವಕಾಶ ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಿತು.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/01/2025 08:38 pm

Cinque Terre

273.26 K

Cinque Terre

2

ಸಂಬಂಧಿತ ಸುದ್ದಿ