ಹುಬ್ಬಳ್ಳಿ: ಮೊದಲೆಲ್ಲಾ ಪೋಸ್ಟ್ ಆಫೀಸಿಗೆ ಹೋಗಿ ಪೋಸ್ಟ್ ಕಾರ್ಡ್ ತಗೊಂಡು ನಮಗ ಬೇಕಾದ ಬೀಗರು, ಬಿಜ್ಜರಿಗೆ, ಕಷ್ಟ ಸುಖಾ ಹೇಳ್ಕೋಳ್ಳಾಕ ನಾವೆಲ್ಲಾ ಉಪಯೋಗ ಮಾಡ್ಕೊಂತಿದ್ವಿ. ಆದ್ರ ಈಗ ಸ್ವಲ್ಪ ಕಾಲಮಾನ ಚೇಂಜ್ ಆಗಿ ಅದ ಪೋಸ್ಟ್ ಕಾರ್ಡ್ ತಗೊಂಡು ಶಾಸಕರ ನೀವ ಆ ಕೆಲ್ಸಾ ಮಾಡಿಲ್ಲ ಈ ಕೆಲ್ಸಾ ಮಾಡಿಲ್ಲಾ ಅಂತ ಹೇಳಿ, ಶಾಸಕರ ಗಮನಕ್ಕ ಅವರ ಏರಿಯಾದಾಗ ಏನೇನ ಸಮಸ್ಯೆ ಅದಾವ ಅಂತ ಶಾಸಕರ ಅಡ್ರೆಸ್ಸಿಗೆ ಡೈರೆಕ್ಟ ಪತ್ರಾ ಬರೆದ ಡಿಫರೆಂಟ್ ರೀತಿ ಪ್ರತಿಭಟನೆ ಮಾಡ್ಯಾರ್ ನೋಡ್ರಿ ಪಾ...ಹುಬ್ಬಳ್ಳಿ ಮಂದಿ.
ಹೀಂಗ ಹುಬ್ಬಳ್ಳಿ ಅಂಬೇಡ್ಕರ್ ಸರ್ಕಲ್ ಬಳಿ ಇರು ಹೆಡ್ ಪೋಸ್ಟ್ ಆಫೀಸ್ ಕಡೆ ನಿಂತು ಗಂಡಮಕ್ಕಳ, ಹೆಣ್ಣಮಕ್ಕಳ, ಕಾಲೇಜು ಹುಡುಗುರು, ಹೀಂಗ ಎಲ್ಲಾರು ಸೇರಿ ಶಾಸಕರ ನಮ್ಮ ಏರಿಯಾ ಕಡೆ ರೋಡ್ ಸರಿ ಇಲ್ಲ, ಗಟಾರ ಸರಿ ಇಲ್ಲ, ಆಟಾ ಆಡು ಗ್ರೌಂಡ್ ಐತಿ ಅಭಿವೃದ್ಧಿ ಇಲ್ಲ ಅಂತಾ ನೂರಾರು ಸಮಸ್ಯೆ ಪೋಸ್ಟ್ ಕಾರ್ಡ್‌ನ್ಯಾಗ್ ಬರದ ನಮ್ಮ ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಮತ್ತ ಹಾಲಿ ಶಾಸಕರಾದ ಜಗದೀಶ ಶೆಟ್ಟರ್ ಸಾಹೆಬ್ರ ಅಡ್ರೆಸ್ಸಿಗೆ ಪೋಸ್ಟ್ ಮಾಡಿ ಡಿಫರೆಂಟ್ ಆಗಿ ಮನವಿ ಮಾಡ್ಯಾರ್ ನೋಡ್ರಿಪಾ.
ಇನ್ನ ಸ್ಮಾರ್ಟ್ ಸಿಟಿ ಅಂತಾ ಹೆಸರಿಗೆ ಅಷ್ಟ ಐತಿ ಆದ್ರ ಹುಬ್ಬಳ್ಳ್ಯಾಗ ಏನು ಸ್ಮಾರ್ಟ್ ಇಲ್ಲರಿ ಬರೇ ಸ್ಮಾರ್ಟ್ ಸಿಟಿ ಹೆಸರನ್ಯಾಗ ಧೂಳ್ ಗಾಳಿ ಕುಡ್ಕೊಂತ ಇದ್ದಿದ್ದ ಆರೋಗ್ಯ ಕೇಡಿಸ್ಕೊಳು ಅಂತಾ ಪರಿಸ್ಥಿತಿ ಆಗೇತಿ ಅಂತಾ ಮಂದಿ ಖುಷಿಲೇ ಹೇಳುವಷ್ಟು ಅಭಿವೃದ್ಧಿ ಆಗೇತಿ ನೋಡ್ರಿ ನಮ್ಮ ಹುಬ್ಬಳ್ಳಿ.
ಇನ್ನ ಜಗದೀಶ ಶೆಟ್ಟರ್ ಸಾಹೇಬ್ರ ಮನಿಗಿ ಲೆಟರ್ ಮುಟ್ಟಿದ ಮ್ಯಾಲ್ ಆದ್ರೂ ತಮ್ಮ ಕ್ಷೇತ್ರದಾಗ ಇರು ಜನರ ತೊಂದ್ರಿ,ತಾಪ್ಪತ್ರಿ, ಬಗೆ ಹರಿಸ್ತಾರೋ ಇಲ್ಲೊ ಅಂತಾ ಲೆಟರ್ ಮುಟ್ಟಿದ ಮ್ಯಾಲ್ ಕಾದ ನೋಡುನ ಅಂತ ಅಂತಾರ ನೋಡ್ರಿ ನಮ್ ಹುಬ್ಬಳ್ಳಿ ಮಂದಿ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
09/10/2022 05:01 pm