ಕುಂದಗೋಳ: ಅತಿವೃಷ್ಟಿಗೆ ಈಡಾಗಿ ಮನೆ ಬಿದ್ದವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾದ ತಾಲೂಕು ಆಡಳಿತ ಹಾಗೂ ತಹಶೀಲ್ದಾರ್ ವಿರುದ್ಧ ಕೈಗೊಂಡ ಪಶುಪತಿಹಾಳ ಗ್ರಾಮಸ್ಥರ ಸಹಯೋಗದ ಪ್ರತಿಭಟನೆ ನಿನ್ನೆ (ಸೋಮವಾರ) ಸಂಜೆ 7:30ಕ್ಕೆ ಅಂತ್ಯ ಕಂಡಿದೆ.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ಮನೆ ಬಿದ್ದ ಫಲಾನುಭವಿಗಳನ್ನು ಪುನಃ ಪರಿಶೀಲನೆ ನಡೆಸಿ ಹೆಚ್ಚಿನ ಪರಿಹಾರ ನೀಡಬೇಕು. ಈಗಾಗಲೇ ತಂತ್ರಾಂಶ ಲಾಕ್ ಮಾಡಲಾದ ಅತಿವೃಷ್ಟಿ ಫಲಾನುಭವಿಗಳಿಗೆ ಪುನಃ ಪರಿಶೀಲನೆ ನಡೆಸಿ ನಿಗದಿತ ಪರಿಹಾರಕ್ಕಾಗಿ ಬೆಳಿಗ್ಗೆ 11ರಿಂದ ಆರಂಭವಾದ ಪ್ರತಿಭಟನೆ 7:30ಕ್ಕೆ ಸಮಾಧಾನವಾಗಿದೆ.
ಪ್ರತಿಭಟನಾನಿರತರನ್ನು ಭೇಟಿ ಮಾಡಿದ ತಹಶೀಲ್ದಾರ್ ನೋಡಲ್ ಅಧಿಕಾರಿಗಳ ತಂಡ ರಚಿಸಿ ಬಿದ್ದಂತಹ ಮನೆ ಸರ್ವೇ ನಡೆಸಿ ನಮ್ಮಿಂದ ತಪ್ಪಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಇನ್ನು ಬೆಳಿಗ್ಗೆಯಿಂದಲೇ ಧರಣಿ ಕೂತ ಪ್ರತಿಭಟನಾಕಾರರು ಮಧ್ಯಾಹ್ನ ತಹಶೀಲ್ದಾರ್ ಕಚೇರಿ ಆವರಣದಲ್ಲೇ ಚುರುಮುರಿ ತಿಂದಿದ್ದಲ್ಲದೇ, ಸಾಯಂಕಾಲ ಸಹ ಪ್ರತಿಭಟನಾ ಸ್ಥಳದಲ್ಲೇ ಚಹಾ ಸವಿದು ಸ್ಥಳದ ಕದಲದೆ ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದರು. ಬಳಿಕ ಸಿಪಿಐ ಮಾರುತಿ ಗುಳ್ಳಾರಿ ಹಾಗೂ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಪ್ರತಿಭಟನಾನಿರತರು ಮನ ಒಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/10/2022 01:13 pm