ಕುಂದಗೋಳ : ಅತಿವೃಷ್ಟಿ ಪರಿಣಾಮ ತಾಲೂಕಿನ ಎಲ್ಲೇಡೆ ಸುರಿದ ಭಾರಿ ಮಳೆಗೆ ಸರ್ಕಾರಿ ಶಾಲಾ ಕಟ್ಟಡಗಳು ಹಾಳಾಗಿವೆ ಆ ಅಭಿವೃದ್ಧಿ ಕಾಮಗಾರಿ ಒಂದೊಂದಾಗಿ ನೆರವೇರಿಯುತ್ತಿವೆ.
ಸದ್ಯ ಹಿರನೇರ್ತಿ ಗ್ರಾಮದಲ್ಲಿ ಆರ್.ಐ.ಡಿ.ಎಸ್ ನಬಾರ್ಡ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ನೂತನ ಸುವ್ಯವಸ್ಥಿತ ಕೊಠಡಿಗಳು ಶಾಲಾ ಮಕ್ಕಳು ಅನುಕೂಲಕ್ಕಾಗಿ ನಿರ್ಮಾಣ ಆಗಿವೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು. ಅವರು ಅಭಿನವ ಕಲ್ಯಾಣಪುರ ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ ನೂತನ ಕಟ್ಟಡಗಳನ್ನು ರಿಬ್ಬನ್ ಕತ್ತರಿಸಿ ಸಸಿಗೆ ನಿರೆರೇಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಳಿಕ ಅಭಿನವ ಕಲ್ಯಾಣಪುರ ಬಸವಣ್ಣನವರು ಆರ್ಶಿವಚನ ನೀಡಿ ಶಾಲೆ ಕೊಠಡಿಗಳನ್ನು ವೀಕ್ಷಿಸಿದರು, ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಶರಣಕುಮಾರ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
20/09/2022 03:55 pm