ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅತಿವೃಷ್ಟಿ ಸಂಕಷ್ಟಕ್ಕೆ ಮಿಡಿದ ಶಾಸಕಿ ಹೃದಯ; ಪರಿಹಾರಕ್ಕೆ ಆಗ್ರಹ

ಕುಂದಗೋಳ: ನೆರೆ ಹಾವಳಿಗೆ ತುತ್ತಾಗಿ ಜನರ ಬದುಕು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದು, ಅದರಲ್ಲೂ ಕೆಲ ಬಡವರಿಗಂತೂ ಬದುಕು ಮರಳಿ ಕಟ್ಟಿಕೊಳ್ಳಲು ಬಲು ಕಷ್ಟವಾಗುತ್ತಿದೆ.

ಕುಂದಗೋಳ ತಾಲೂಕಿನ ಕೆಲ ಹಳ್ಳಿಗಳಲ್ಲಂತೂ ಜನರು ಮನೆ ಸಾಮಗ್ರಿ, ಜಾನುವಾರು, ಮೇವು, ದವಸ ಧಾನ್ಯ, ಪಾತ್ರೆ ಪಗಡಿ ಸಹ ಅತಿವೃಷ್ಟಿ ಸುಳಿಗೆ ಸಿಲುಕಿ ಹಾಳಾಗಿ ಹೋಗಿವೆ.

ಈ ದುಸ್ಥಿತಿಯನ್ನು ಅರಿತ ಶಾಸಕಿ ಕುಸುಮಾವತಿ ಶಿವಳ್ಳಿ ಇಂದು ಅಧಿಕಾರಿಗಳ ಸಮ್ಮುಖದಲ್ಲಿ ನೆರೆಗೆ ತುತ್ತಾಗಿ ಬೆಳೆ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ.

ಕುಂದಗೋಳ ತಾಲೂಕಿನ ಬೆನಕನಹಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ, ಹಿರೇನೇರ್ತಿ ಸೇರಿದಂತೆ ನಾನಾ ಹಳ್ಳಿಗಳಿಗೆ ಭೇಟಿ ಕೊಟ್ಟ ಶಾಸಕರು, ಬೆಣ್ಣೆ ಹಳ್ಳದ ಪ್ರವಾಹ ಪರಿಸ್ಥಿತಿ ಹಾನಿ ವೀಕ್ಷಣೆ ಮಾಡಿ ತಕ್ಷಣ ಪರಿಹಾರ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸಲು ಒತ್ತಡ ಹಾಕುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಆರ್.ಪಿ.ಕಿತ್ತೂರ ಹಾಗೂ ಸಂತ್ರಸ್ತರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

07/09/2022 09:24 pm

Cinque Terre

75.22 K

Cinque Terre

1

ಸಂಬಂಧಿತ ಸುದ್ದಿ