ಹುಬ್ಬಳ್ಳಿ: ನಗರದ ಕುಸಗಲ್ ರಸ್ತೆಯ ಮದುರಾ ಕಾಲೋನಿಯ ಎದುರಿಗೆ ಇರುವ ಖಾಲಿ ಜಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಬಿಡಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಇದೆ ಜಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು. ಆದರೆ ಪಾಲಿಕೆ ಅವರಿಗೆ ಅಲ್ಲೆ ಅನುಕೂಲ ಮಾಡಿ ಕೊಡಬೇಕೆಂದು ವ್ಯಾಪಾರಸ್ಥರು ಮತ್ತು ಸಂಘಟನೆ ಮೇಯರ್‌ಗೆ ಮನವಿ ಸಲ್ಲಿಸಿದರು.
Kshetra Samachara
02/09/2022 11:06 am