ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಟ್ರಸ್ಟ್ ಕಮಿಟಿಯಲ್ಲಿ ಬೇರೆಯವರು ಏಕೆ?; ಮನ್ಸೂರ್ ಗ್ರಾಮಸ್ಥರ ಪ್ರಶ್ನೆ

ಧಾರವಾಡ: ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ರಾಜ್ಯದಲ್ಲಿ ಅತೀ ಹೆಚ್ಚು ಕೊಡುಗೆ ನೀಡಿದ ಜಿಲ್ಲೆ ಧಾರವಾಡ. ಅದೇ ಕಾರಣಕ್ಕೆ ಧಾರವಾಡದಲ್ಲಿ ನಾಲ್ಕು ಮಹನೀಯರ ಹೆಸರಿನಲ್ಲಿ ಟ್ರಸ್ಟ್‌ಗಳಿದ್ದು, ಅದಕ್ಕೆ ಮಾಡಿರೋ ನೇಮಕಾತಿಗಳೇ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ಒಟ್ಟು 21 ಟ್ರಸ್ಟ್‌ಗಳ ಎಲ್ಲ ನೇಮಕಾತಿ ಅಧಿಸೂಚನೆಯನ್ನೇ ವಾಪಸ್ ಪಡೆದಿದೆಯಾದರೂ, ವಿವಾದ ಮಾತ್ರ ನಿಂತಿಲ್ಲ.

ಅದರಲ್ಲಿಯೂ ಧಾರವಾಡ ಮೂಲದವರಾಗಿ ದೇಶದ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾಗಿದ್ದ ಡಾ. ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಬಸವರಾಜ ರಾಜಗುರು ಹೆಸರಿನಲ್ಲಿರೋ ಟ್ರಸ್ಟ್‌ನಲ್ಲಿ ಈ ಸಲ ಆ ಕುಟುಂಬದ ಸದಸ್ಯರನ್ನೇ ಕಡೆಗಣಿಸಲಾಗಿತ್ತು. ಅದು ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯವಾಗಿ ಮಲ್ಲಿಕಾರ್ಜುನ ಮನ್ಸೂರ್ ಮೂಲ ಮನೆ ಇರೋದು ಧಾರವಾಡ ತಾಲೂಕಿನ ಮನ್ಸೂರು ಗ್ರಾಮದಲ್ಲಿ. ‌

ಅವರ ಸಮಾಧಿ ಇರೋದು ಧಾರವಾಡ ನಗರದಲ್ಲಿ. ಈ ಹಿಂದೆ ಮನ್ಸೂರ್ ಗ್ರಾಮದಲ್ಲಿನ ನಿವಾಸಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾಗ, ಗ್ರಾಮದಲ್ಲಿನ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಯೊಬ್ಬರು ಹಾಗೂ ಕುಟುಂಬದ ಓರ್ವ ಸದಸ್ಯರನ್ನು ಟ್ರಸ್ಟ್ ಸಮಿತಿಯಲ್ಲಿ ಸೇರಿಸಿಕೊಳ್ಳುವಂತೆ ಕೇಳಲಾಗಿತ್ತು. ಆದ್ರೆ‌, ಈ ಸಲದ ಅಧಿಸೂಚನೆಯಲ್ಲಿ ಕುಟುಂಬ ಸದಸ್ಯರ ಹೆಸರಾಗಲಿ, ಗ್ರಾಮದ ಜನಪ್ರತಿನಿಧಿಯ ಹೆಸರಾಗಲಿ ಇರಲಿಲ್ಲ. ಈಗ ಅಧಿಸೂಚನೆಯನ್ನೇ ಸರ್ಕಾರ ವಾಪಸ್ ಪಡೆದಿದೆ.

ಇದೇ ರೀತಿ ಬಸವರಾಜ ರಾಜಗುರು ಟ್ರಸ್ಟ್‌ನಲ್ಲಿಯೂ ಕುಟುಂಬ ಸದಸ್ಯರನ್ನು ಕಡೆಗಣಿಸಲಾಗಿದೆ. ಹೀಗಾಗಿ ಮುಂದೆ ಟ್ರಸ್ಟ್ ಪುನರ್‌ ರಚನೆ ಮಾಡೋವಾಗ ಕುಟುಂಬ ಸದಸ್ಯರ ಹೆಸರು ಸೇರಿಸಬೇಕು. ಇಲ್ಲದೇ ಹೋದಲ್ಲಿ ಗ್ರಾಮಸ್ಥರೆಲ್ಲ ಜಿಲ್ಲಾಧಿಕಾರಿ ಕಚೇರಿಗೆ ಬಂದು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

26/08/2022 05:02 pm

Cinque Terre

79.56 K

Cinque Terre

1

ಸಂಬಂಧಿತ ಸುದ್ದಿ