ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿನಗರದ ಸ್ವಚ್ಛತೆ ಜೊತೆಗೆ ಆದಾಯಕ್ಕೆ ಆದ್ಯತೆ; 500 ಬಸ್ ನಿಲ್ದಾಣಗಳಿಗೆ ಚಿಂತನೆ

ಹುಬ್ಬಳ್ಳಿ: ಅವಳಿನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಡಿಜಿಟಲ್ ಜಾಹೀರಾತು ಹಾಗೂ ಬಸ್ ನಿಲ್ದಾಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪಾಲಿಕೆ ಸದಸ್ಯರು ಆಯುಕ್ತರಿಗೆ ಆಗ್ರಹಿಸಿದ್ದಾರೆ.

ಹೌದು. ನಗರದಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಮೆಕ್ಯಾನಿಕಲ್ ಸ್ವೀಪಿಂಗ್ ಬಗ್ಗೆ ಪಾಲಿಕೆ ಚಿಂತನೆ ನಡೆಸಿದ್ದು, ಕೂಡಲೇ ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಪಾಲಿಕೆ ಆಯುಕ್ತರು ನೀಡಿರುವ ಬೆನ್ನಲ್ಲೇ ಪಾಲಿಕೆ ಸದಸ್ಯರು, ಅವಳಿನಗರದ ಸ್ವಚ್ಛತಾ ಜವಾಬ್ದಾರಿ ನಮ್ಮದು ಈ ಬಗ್ಗೆ ನಿರ್ಲಕ್ಷ್ಯ ಮಾಡುವುದು ಬೇಡ ಎಂದು ವಿನಂತಿಸಿದರು.

ಇನ್ನೂ ಅವಳಿನಗರದಲ್ಲಿ 500 ಬಸ್ ಸ್ಟ್ಯಾಂಡ್‌ ನಿರ್ಮಾಣ ಮಾಡಲು ಟೆಂಡರ್ ಕೂಡ ಕರೆಯಲಾಗಿದೆ. ಈ ಬಗ್ಗೆ ಪ್ರಾಯೋಗಿಕ ಹಂತದ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಡಿಜಿಟಲ್ ಜಾಹೀರಾತು ಮೂಲಕ ಪಾಲಿಕೆ ಆದಾಯಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

25/08/2022 03:22 pm

Cinque Terre

15.55 K

Cinque Terre

2

ಸಂಬಂಧಿತ ಸುದ್ದಿ