ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಶಾಶ್ವತ ಪರಿಹಾರ ಕಂಡುಕೊಂಡ ಹುಲಿಕೇರಿ ಕೆರೆ: ನಿಟ್ಟುಸಿರು ಬಿಟ್ಟ ಜನತೆ

ಅಳ್ನಾವರ: ತಾಲೂಕು ಕಂಡ ಅತಿ ದೊಡ್ಡ ಕೆರೆ ಈ ಹುಲಿಕೇರಿ ಇಂದಿರಮ್ಮನ ಕೆರೆ. ಅಷ್ಟೇ ಅಲ್ಲದೆ ಧಾರವಾಡ ಜಿಲ್ಲೆಯ ಎರಡನೆಯ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೂ ಪಾತ್ರವಾದ ಕೆರೆ ಇದು. ಸುಮಾರು 700 ಎಕರೆ ಭೂ ವಿಸ್ತೀರ್ಣ ಹೊಂದಿದ, ಸರಿ ಸುಮಾರು 10,000 ಎಕರೆ ವಿಸ್ತೀರ್ಣದಷ್ಟು ಹೊಲಗಳಿಗೆ ನೀರನ್ನು ಪೂರೈಸುವ ಬೃಹತ್ ಕೆರೆ ಇದಾಗಿದೆ. ಕಳೆದೆರಡು ವರ್ಷಗಳ ಹಿಂದೆ ಅಕಾಲಿಕವಾಗಿ ಸುರಿದ ಅತಿಯಾದ ಮಳೆಯಿಂದ ಅತಿವೃಷ್ಟಿ ನಿರ್ಮಾಣವಾಗಿ ಈ ಕೆರೆಯ ತಡೆಗೋಡೆ ಒಡೆದು ಬಹಳಷ್ಟು ಪ್ರಮಾಣದ ಹಾನಿಯುಂಟು ಮಾಡಿತ್ತು.

ಅಳ್ನಾವರ ಸೇರಿದಂತೆ ಪಕ್ಕದ ಖಾನಾಪುರ ತಾಲೂಕಿನ ಕೆಲ ಹಳ್ಳಿಗಳಿಗೆ ಜಲ ದಿಗ್ಭಂದನ ಮಾಡಿತ್ತು. ಅಳ್ನಾವರದಲ್ಲಂತೂ ಅಪಾರ ಪ್ರಮಾಣದ ಹಾನಿ ಉಂಟುಮಾಡಿತ್ತು.ತಡೆಗೋಡೆ ಒಡೆದ ಪರಿಣಾಮ ಕಳೆದ ಎರಡ್ಮೂರು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿತ್ತು. ಆದರೆ ತಡೆಗೋಡೆಯ ಕಾರ್ಯ ಭರದಿಂದ ಸಾಗುತ್ತಿರುವುದರಿಂದ ಇನ್ನು ಮುಂದೆ ಅಂತಹ ಭೀತಿ ಎದುರಾಗುವ ಲಕ್ಷಣಗಳಿಲ್ಲ.

ಇನ್ನು ಸತತ ಅಭಿವೃದ್ಧಿ ಕಾರ್ಯಗಳಿಂದಲೇ ಸುದ್ದಿಯಾಗುತ್ತಿರುವ ಕಲಘಟಗಿ ಮತಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರ ಅಭಿವೃದ್ಧಿ ಕೆಲಸಗಳಿಗೆ ಮೊದಲು ನನ್ನ ಆದ್ಯತೆ ಎಂದರು. ಸೀರೆ,ಬಟ್ಟೆ,ಹಣ ಕೊಟ್ಟು ಮತಕ್ಷೇತ್ರದ ಜನತೆಯನ್ನು ನನ್ನತ್ತ ಒಲಿಸಿಕೊಳ್ಳುವ ಜಾಯಮಾನ ನನ್ನದಲ್ಲ. ಅದು ಈಗಾಗಲೇ ಕ್ಷೇತ್ರದ ಜನತೆಗೆ ಗೊತ್ತಾಗಿದೆ ಎಂದು ಖಾರವಾಗಿಯೇ ಗುಡುಗಿದರು.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ

Edited By : Manjunath H D
Kshetra Samachara

Kshetra Samachara

19/08/2022 07:13 pm

Cinque Terre

99.71 K

Cinque Terre

2

ಸಂಬಂಧಿತ ಸುದ್ದಿ