ಹುಬ್ಬಳ್ಳಿ: ವಿದ್ಯುತ್ ಇಲಾಖೆಯ ಜವಾಬ್ದಾರಿಯನ್ನು ತೆಗೆದುಕೊಂಡ ನಂತರ, 37 ಕಡೆಗಳಲ್ಲಿ ಹೊಸದಾಗಿ ಸಬ್‌ಸ್ಟೇಶನ್ ಮಾಡಿದ್ದೇವೆ. ವಿದ್ಯುತ್ ಪೂರೈಕೆ ಸಮರ್ಪಕವಾಗಿ ನಡೆಯಬೇಕು ಮತ್ತು ಜನರ ಬೇಡಿಕೆಯ ಪ್ರಕಾರ ಸಬ್‌ಸ್ಟ್ರೇಶನ್ ಗಳಿವೆ ಎಂದು ಇಂಧನ ಹಾಗೂ ಕನ್ನಡ- ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ನಗರದಲ್ಲಿ ದೇಶಪಾಂಡೆ ಫೌಂಡೇಶನ್ ಸ್ಕಿಲ್‌ನಲ್ಲಿ ಹಮ್ಮಿಕೊಂಡಿದ್ದ ಕಿರಿಯ ಪವರ್‌ಮನ್‌ಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಹೆಸ್ಕಾಂ ಸಂಬಂಧಿಸಿದ ಬೇಡಿಕೆಗಳು ಏನಿವೆ? ಹಿರಿಯ ಅಧಿಕಾರಿಗಳ ಹೇಳಿಕೆ ಪ್ರಕಾರ ಒಂದು ಸಭೆ ಮಾಡಲಾಗುತ್ತಿದೆ. ಜನರಿಗೆ ವಿದ್ಯುತ್ ಅಡಚಣೆ ಆಗಬೇಕಾದರೆ ಮೊದಲಿಗೇ ತಿಳಿಸಬೇಕೆಂದು ಅಧಿಕಾರಿಗಳಿಗೆ ಹೇಳಿದೆ. ಯಾವುದೇ ಕಾರಣಕ್ಕೆ ರೈತರಿಗೆ ಮತ್ತು ಜನರಿಗೆ ವಿದ್ಯುತ್ ಅಡಚಣೆ ಆಗಬಾರದು. ಕೆಲವೊಂದು ಕಡೆ ಲೋಪದೋಷ ಆಗಿದ್ದರೆ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಬಿಲ್ ಬಾಕಿ ಇರುವ ಹಿನ್ನೆಲೆಯಲ್ಲಿ, ಕೆಲವೊಂದು ಬಿಲ್ ಕಟ್ಟಬೇಕೆಂದು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದೆ. ಗ್ರಾಮ ಪಂಚಾಯಿತಿನಲ್ಲಿ, ದೊಡ್ಡ ನೀರಾವರಿ ಕಚೇರಿಯಲ್ಲಿ, ಬಿಬಿಎಂಪಿ ಯಲ್ಲಿ ಹೀಗೆ ಯಾವ ಯಾವ ಕಚೇರಿಗಳಲ್ಲಿ ಬಾಕಿ ಇದ್ದ ಬಿಲ್ ಕಟ್ಟಲು ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿಯೂ ಪವರ್ ಕಟ್ ಮಾಡಿದ ಉದಾಹರಣೆ ಇವೆ. ಈ ನಿಟ್ಟಿನಲ್ಲಿ ಆರ್‌ಡಿಪಿಐ ಹಂತ ಹಂತವಾಗಿ ಹಣವನ್ನು ಕಟ್ಟುತ್ತಿದ್ದಾರೆ. ನಾವು ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ ಮಾಡುತ್ತಿಲ್ಲ ಎಂದರು.
Kshetra Samachara
02/08/2022 03:56 pm