ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಲ್ಲಿದ್ದಲು ಸಂಪನ್ಮೂಲದ ಸಮರ್ಥ ಬಳಕೆಯಿಂದ ದೇಶದಲ್ಲಿ ವಿದ್ಯುತ್ ಸ್ವಾವಲಂಬನೆ: ಶಾಸಕ ಬೆಲ್ಲದ

ಧಾರವಾಡ: ಕಲ್ಲಿದ್ದಲು ಗಣಿಗಳ ಸಮರ್ಪಕ ಬಳಕೆಯಿಂದ ದೇಶದಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧ್ಯವಾಗಿದೆ. ಹುಬ್ಬಳ್ಳಿ, ಧಾರವಾಡದಲ್ಲಿ ಭೂ ಅಂತರ್ಗತ ವಿದ್ಯುತ್ ಕೇಬಲ್ ಅಳವಡಿಸುವ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸರ್ಕಾರ ಅಗತ್ಯ ಅನುದಾನ ನೀಡುವ ಭರವಸೆ ನೀಡಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ, ಇಂಧನ ಇಲಾಖೆ, ಧಾರವಾಡ ಜಿಲ್ಲಾಡಳಿತ ,ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ‌ ನಿಯಮಿತ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಇಂದು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಜನರ ಮೂಲ‌ ಸೌಕರ್ಯಗಳಾದ ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ದೀಪ ಮೊದಲಾದ ವ್ಯವಸ್ಥೆಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ ಮಾತನಾಡಿ, ಉಜ್ವಲ ಭಾರತ ಉಜ್ವಲ ಭವಿಷ್ಯ ಪವರ್ @2047 ಶೀರ್ಷಿಕೆಯಡಿ ಜುಲೈ 25 ರಿಂದ 30 ರವರೆಗೆ ದೇಶದಾದ್ಯಂತ ವಿದ್ಯುತ್ ಮಹೋತ್ಸವ ಜರುಗುತ್ತಿದೆ. ಇಂಧನ ಇಲಾಖೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ, ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಯೋಜನೆಗಳ ಕುರಿತು ಫಲಾನುಭವಿಗಳ ಅನಿಸಿಕೆ ಸಂಗ್ರಹಿಸಲಾಗುತ್ತಿದೆ. ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತರು ಎದುರಿಸುತ್ತಿದ್ದ ವಿದ್ಯುತ್ ಪರಿವರ್ತಕಗಳ ಸಮಸ್ಯೆ ನಿವಾರಿಸಲು ಟಿ.ಸಿ.ಬ್ಯಾಂಕ್‌ಗಳ ಮೂಲಕ ಕೃಷಿಕರಿಗೆ ತ್ವರಿತ ಸ್ಪಂದನೆ ನೀಡಲಾಗುತ್ತಿದೆ ಎಂದರು.

ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ವಿನಾಯಕ ಪಾಲನಕರ್, ವೆಂಕಟರೆಡ್ಡಿ, ವಿಚಕ್ಷಣಾ ದಳದ ಎಸ್.ಪಿ.ಶಂಕರ ಮಾರಿಹಾಳ ಮತ್ತಿತರರು ವೇದಿಕೆಯಲ್ಲಿದ್ದರು.

Edited By : Shivu K
Kshetra Samachara

Kshetra Samachara

29/07/2022 02:12 pm

Cinque Terre

20.5 K

Cinque Terre

1

ಸಂಬಂಧಿತ ಸುದ್ದಿ