ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವಾರು ಕಡೆ ಮನೆಗಳು ಬಿದ್ದಿವೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಎಸ್ ಎಸ್ ಕೆ ಸಮಾಜ ಮುಖಂಡ, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ರಾಜು ನಾಯಕವಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಹಳೆ ಹುಬ್ಬಳ್ಳಿ ಭಾಗದ ನವ ಆನಂದನಗರದ ಶೈಲಜಾ ಎಂಬುವರ ಕುಸಿದು ಬಿದ್ದ ಮನೆಯತ್ತ ಧಾವಿಸಿ, ಕುಟುಂಬದ ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಮಾತನಾಡಿದರು. ಇದುವರೆಗೂ ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದಿಲ್ಲ. ಈ ಮನೆಯಲ್ಲಿ ಹಿರಿಯರಾದ ವಿಶೇಷಚೇತನ ಮಹಿಳೆ, ಅವರ ಸೊಸೆ ಶೈಲಜಾ, ಅವರ ಪತಿ ಪ್ಯಾರಾಲಿಸ್ ನಿಂದಾಗಿ ಓಡಾಡುವ ಶಕ್ತಿ ಕಳೆದುಕೊಂಡಿದ್ದಾರೆ ಹಾಗೂ ಚಿಕ್ಕಪುಟ್ಟ ಐದು ಮಂದಿ ಹೆಣ್ಣುಮಕ್ಕಳಿದ್ದಾರೆ.
ದುಡಿಯುವ ಸಾಮರ್ಥ್ಯ ಇಲ್ಲದ ಪತಿಯಿಂದಾಗಿ ಇವರ ಜೀವನ ದುಸ್ತರವಾಗಿದೆ. ಈ ಕಡು ಬಡತನದ ಕುಟುಂಬಕ್ಕೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರದ ಪರಿಹಾರ ಶೀಘ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
17/07/2022 09:48 pm