ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಹಶೀಲ್ದಾರರಿಗೆ ಜನರ ಸಮಸ್ಯೆ ಸುರಿಮಳೆ ಅಭಿವೃದ್ಧಿ ಯಾವಾಗ ?

ಕುಂದಗೋಳ : ನಮ್ಮೂರಿಗೆ ರಸ್ತೆ ವ್ಯವಸ್ಥೆ ಇಲ್ಲಾ, ನಮ್ಮೂರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಇಲ್ಲಾ, ನಮ್ಮೂರಿಗೆ ಆ್ಯಂಬುಲನ್ಸ್ ಹಾಳಾದ ರಸ್ತೆಲೀ ಬರೋದೆ ಸಮಸ್ಯೆ , ಸಾರಿಗೆ ಬಸ್ ಅಂತೂ ಇಲ್ವೇ ಇಲ್ಲಾ ಬಿಡಿ, ಕುಡಿಯುವ ನೀರು ಪೂರೈಕೆ ಸರಿಯಿಲ್ಲಾ, ಅರ್ಜಿ ಕೊಟ್ಟ ಪಹಣಿ ತಿದ್ದುಪಡಿ ಆಗಿಲ್ಲಾ, ಶಾಲಾ ಕಟ್ಟಡದ ಅವ್ಯವಸ್ಥೆ ಕೇಳುವವರೇ ಇಲ್ಲಾ.

ಹೀಗೆ ಸಾಲು ಸಾಲು ಸರಮಾಲೆಯಂತೆ ಸಮಸ್ಯೆಗಳೇ ಕೇಳಿ ಬಂದಿದ್ದು, ಕುಂದಗೋಳ ತಾಲೂಕಿನ ಬಸಾಪೂರ ಗ್ರಾಮದ ತಹಶೀಲ್ದಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ.

ಇಂದು ಬೆಳಿಗ್ಗೆ ಶಾಲಾ ಮಕ್ಕಳ ಸಮೇತ ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳನ್ನು ಗ್ರಾಮ ವಾಸ್ತವ್ಯ ವೇದಿಕೆಗೆ ಕರೆ ತಂದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಅದರಲ್ಲೂ ವಿದ್ಯಾರ್ಥಿನಿಯರು ವೇದಿಕೆ ಏರಿ ಬಸ್ ಸಮಸ್ಯೆ, ರಸ್ತೆ ಸಮಸ್ಯೆ ವಿವರಿಸಿ ತಹಶೀಲ್ದಾರ ಗಮನ ಸೆಳೆದರೂ,ಅದರಂತೆ ಕುಂದಗೋಳ ಬೆನಕನಹಳ್ಳಿ ಮುಳ್ಳೊಳ್ಳಿ ಗ್ರಾಮದ ರಸ್ತೆ ಹಾನಿ, ರಸ್ತೆ ಅವ್ಯವಸ್ಥೆ, ಬ್ರಿಡ್ಜ್ ಹಾನಿ ಸರಿಪಡಿಸುವ ಬಗ್ಗೆ ಸ್ಮಶಾನ ಭೂಮಿ ಕುರಿತು ಚರ್ಚೆಗೆ ತಹಶೀಲ್ದಾರ "ನೋಡೋಣ, ಅಧಿಕಾರಿಗಳಿಗೆ ಹೇಳುವೆ, ಕ್ರಮ ಕೈಗೊಳ್ಳುತ್ತೇವೆ ಎಂಬ ಉತ್ತರ" ಮಾಮುಲಾಗಿತ್ತು.

ಒಟ್ಟಿನಲ್ಲಿ ತಹಶೀಲ್ದಾರ ಗ್ರಾಮ ವಾಸ್ತವ್ಯ ಸಮಸ್ಯೆಗಳನ್ನೇ ಆಲಿಸಿ ಒಂದು ಸರ್ಕಾರಿ ದಿನ ಕಳೆದು ಬರಲು ಮಾತ್ರ ಸಿಮೀತ ಆಗ್ತಾ ಇದ್ದು, ಈ ಹಿಂದೆ ನಡೆದಂತಹ ಯಲಿವಾಳ, ಗೌಡಗೇರಿ, ಗುಡೇನಕಟ್ಟಿಯ ಗ್ರಾಮ ವಾಸ್ತವ್ಯದ ಸಮಸ್ಯೆ ಇಂದಿಗೂ ಈಡೇರಿಲ್ಲಾ ಎಂಬ ಮಾತು ಜನರ ಬಾಯಲ್ಲಿ ಕೇಳಿ ಬಂದವು.

Edited By : Shivu K
Kshetra Samachara

Kshetra Samachara

16/07/2022 07:30 pm

Cinque Terre

101.61 K

Cinque Terre

1

ಸಂಬಂಧಿತ ಸುದ್ದಿ