ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಾವರಿ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದೆ : ಸೊರಬದಮಠ ಆರೋಪ

ಹುಬ್ಬಳ್ಳಿ : ಕರ್ನಾಟಕ ನೀರಾವರಿ ಇಲಾಖೆ ಸಂಪೂರ್ಣವಾಗಿ ಭ್ರಷ್ಟಾಚಾದಲ್ಲಿ ಮುಳಗಿ ಹೋಗಿದೆ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಧಾರವಾಡದಲ್ಲಿದೆ. ಈ ಕಚೇರಿಯು 22 ಜಿಲ್ಲೆಗಳ ಪ್ರಧಾನ ಕಚೇರಿಯಾಗಿ ಕೆಲಸವನ್ನು ಮಾಡುತ್ತಿದೆ. ಇನ್ನು ಈ ಕಚೇರಿಯ ಅಕ್ರಮದ ಬಗ್ಗೆ ಸಿಬಿಐಗೆ ತನಿಖೆ ಮಾಡಬೇಕು ಎಂದು ಆಗ್ರಹವನ್ನು ಮಾಡಿದ್ದಾರೆ.

ನಂಜುಂಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು. ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗಳು ಉತ್ತರ ಕರ್ನಾಟಕಕ್ಕೆ ಬಂದರೆ ಯುವಕರಿಗೆ ಕೆಲಸ ಸಿಗುತ್ತದೆ. ನಿರುದ್ಯೂಗ ಕಡಿಮೆಯಾಗುತ್ತೆ ಎಂದು ಅವರು ಹೇಳಿದರು.

2018ರ ಕ್ಯಾಬಿನೆಟ್ ಸಭೆಯಲ್ಲಿ 9 ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡಿ ಆದೇಶ ಮಾಡಿದ್ದರು ಸದ್ಯ ಯಾವುದು ಜಾರಿ ಆಗಿಲ್ಲ. ನಾವು ನಮ್ಮ ಕಾರ್ಯಕರ್ತರಿಂದ ಕೇಸ್ ಹಾಕಿಸಿದ್ದೇವೆ. 2014 ರಿಂದ 2022 ರ ವರೆಗೆ ಕಾಮಗಾರಿಯಾಗದೆ 28 ಕೋಟಿ ಹಣ ನುಂಗಿ ಹಾಕಿದ್ದರು.

ಕೆಲ ಭ್ರಷ್ಟ ಅಧಿಕಾರಿಗಳು ಆ ಕೇಸ್‌ನಲ್ಲಿ 22 ಜನರನ್ನು ಅಮಾನತು ಮಾಡಲಾಗಿದೆ. ಅದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇನ್ನು ಆ ಇಲಾಖೆಯಲ್ಲಿ ರಿಟೈಡ್ ಆದವರು ಮತ್ತು ಕೆಲಸದಲ್ಲಿರುವ 22 ಜನರ ಮೇಲೆ ಕೇಸ್ ಆಗಿದೆ.

ಆ ಕೇಸ್ ನ್ನು ಸಿಓಡಿಗೆ ಕೊಟ್ಟು ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ. 22 ಜಿಲ್ಲೆಗಳಿಗೆ ಸಂಭಂದಪಟ್ಟಂತಹ ದೊಡ್ಡ ಇಲಾಖೆ ನೀರಾವರಿ ಇಲಾಖೆ. ಇದರ ಪ್ರಧಾನ ಕಚೇರಿ ಧಾರವಾಡದ ಶ್ರಿನಗರದಲ್ಲಿದೆ. ಕೇವಲ 28 ಕೋಟಿ ಅಲ್ಲ 1000 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರವಾಗಿದೆ. ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ನಾನು ಸಹ ಪ್ರಧಾನಮಂತ್ರಿ, ಅಮಿತ್ ಶಾಗೆ ಮನವಿ ಮಾಡಿದ್ದೇನೆ. ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡಿ ಪ್ರಸ್ತಾಪ ಮಾಡಿಲಾಗಿದೆ ಎಂದರು.

Edited By :
Kshetra Samachara

Kshetra Samachara

25/06/2022 02:13 pm

Cinque Terre

71.17 K

Cinque Terre

0

ಸಂಬಂಧಿತ ಸುದ್ದಿ