ನವಲಗುಂದ: ಎಂಟು ವರ್ಷದ ಅವಧಿಯಲ್ಲಿ ಇಡೀ ದೇಶ ಭಾರತೀಯ ಜನತಾ ಪಾರ್ಟಿಗೆ ಸಂಪೂರ್ಣ ಬಹುಮತ ಕೊಟ್ಟ ಪರಿಣಾಮ ಧನ್ಯವಾದಗಳನ್ನು ಸಲ್ಲಿಸುವಂತಹ ಕೆಲಸ ದೇಶಾದ್ಯಂತ ಮಾಡಲಾಗುತ್ತಿದೆ. ಯಾವ ರೀತಿ ಜನಸೇವೆ ಮಾಡಬೇಕು ಎಂಬುದನ್ನು ನರೇಂದ್ರ ಮೋದಿಯವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಇಡೀ ಜಗತ್ತಿನಲ್ಲೇ ಮಾತನಾಡಿ ಕೊಳ್ಳುತ್ತಿದ್ದಾರೆ ಎಂದು ನವಲಗುಂದ ಪಟ್ಟಣದಲ್ಲಿ ಜವಳಿ ಮತ್ತು ಸಕ್ಕರೆ ಖಾತೆ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನವಲಗುಂದ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನವಲಗುಂದ ಭಾಗದಲ್ಲಿನ ತುಪ್ಪರಿಹಳ್ಳಕ್ಕೆ 312 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಎರಡು-ಮೂರು ತಿಂಗಳಲ್ಲಿ ಭೂಮಿ ಪೂಜೆ ಮಾಡುತ್ತೇವೆ. ರೈತರ ಮಕ್ಕಳಿಗೆ ನಮ್ಮ ಭಾಗದಲ್ಲೇ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಜವಳಿ ಪಾರ್ಕ್‌ಅನ್ನು ಘೋಷಣೆ ಮಾಡಿದ್ದೇವೆ. ಸುಮಾರು 5 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಜೊತೆಗೆ ತರಬೇತಿಯನ್ನು ನೀಡಲಾಗುವುದು ಎಂದರು.
ಮೋದಿ ಅವರು 8 ವರ್ಷದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಜನಧನ್ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಜಲ ಜೀವನ್ ಮಿಷನ್, ಗರೀಬ್ ಕಲ್ಯಾಣ ಯೋಜನೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಗೊಳಿಸಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ಸಂದರ್ಭದಲ್ಲಿ ಧಾರವಾಡ ಹಾಗೂ ನವಲಗುಂದದಲ್ಲಿ ಆಕ್ಷಿಜನ್ ಘಟಕಗಳನ್ನು ನಿರ್ಮಾಣ ಮಾಡಿ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಿವೆ. ಕಳೆದ ಎಂಟು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕೇ ಸಾಥ್ ಸಬ್ ಕಾ ವಿಕಾಸ ಜೊತೆಗೆ ಎಲ್ಲರ ಜೊತೆಗಿದ್ದು ಪ್ರಪಂಚವೇ ಮೆಚ್ಚುವಂತ ಕಾರ್ಯವನ್ನು ಮಾಡಿರುವ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಎಸ್. ಬಿ ದಾನಪ್ಪಗೌಡರ, ಎನ್.ಪಿ ಕುಲಕರ್ಣಿ, ಬಸಣ್ಣ ಬೆಳವಣಕಿ, ಶಂಕರಗೌಡ ರಾಯನಗೌಡರ, ಮಹೇಶ ತೊಗಲಂಗಿ, ಮಹಾಂತೇಶ ಕಲಾಲ, ಬಸವರಾಜ ಕಟ್ಟಿಮನಿ, ವಿನಾಯಕ ದಾಡಿಬಾವಿ, ಪ್ರಭು ಇಬ್ರಾಹಿಂಪೂರ, ಸಿದ್ದು ಪೂಜಾರ ಇತರರು ಉಪಸ್ಥಿತರಿದ್ದರು.
Kshetra Samachara
06/06/2022 08:58 pm