ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮದಿಹಾಳದಲ್ಲಿ ನಿರ್ಮಾಣವಾಯ್ತು ಸುಂದರ ಪಾರ್ಕ್, ಸುಸಜ್ಜಿತ ಆಸ್ಪತ್ರೆ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಜನಪ್ರತಿನಿಧಿಗಳ ಹಿತಾಸಕ್ತಿ, ಅಧಿಕಾರಿಗಳ ಸಹಕಾರವಿದ್ದರೆ ಅಭಿವೃದ್ಧಿ ಕೆಲಸಗಳಿಗೆ ಕೊರತೆ ಇಲ್ಲ ಎಂಬುದಕ್ಕೆ ಮದಿಹಾಳದಲ್ಲಿ ನಿರ್ಮಾಣವಾಗಿರುವ ಪಾರ್ಕ್ ಹಾಗೂ ಸುಸಜ್ಜಿತ ಆಸ್ಪತ್ರೆ ಕಟ್ಟಡವೇ ಉತ್ತಮ ನಿದರ್ಶನವಾಗಿದೆ.

ನೀವು ಈಗ ದೃಶ್ಯಗಳಲ್ಲಿ ನೋಡುತ್ತಿರುವ ಈ ಸುಂದರ ಸುಸಜ್ಜಿತ ಪಾರ್ಕ್, ಬಾಸ್ಕೆಟ್ ಬಾಲ್ ಗ್ರೌಂಡ್ ಹಾಗೂ ಆಸ್ಪತ್ರೆ ಕಳೆದ ಕೆಲ ವರ್ಷಗಳಿಂದ ಖುಲ್ಲಾ ಜಾಗೆಯಾಗಿ ಉಪಯೋಗಕ್ಕೆ ಬಾರದಂತಾಗಿತ್ತು. ಪಾಲಿಕೆ ಒಡೆತನದ 21 ಗುಂಟೆ ಜಾಗೆ ಇದಾಗಿತ್ತು. ಈ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿಕೊಡುವಂತೆ ಹಳೆಯ ಧಾರವಾಡ ಅಂದರೆ ಮದಿಹಾಳ ಭಾಗದ ಜನತೆ ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ ಮಾಡಿಕೊಂಡಿದ್ರಂತೆ. ಅಂದು ಖುಲ್ಲಾ ಇದ್ದ ಈ ಜಾಗದಲ್ಲಿ ಕಸ ತುಂಬುವ ವಾಹನಗಳ ಪಾರ್ಕಿಂಗ್ಗಾಗಿ ಬಳಸಲಾಗುತ್ತಿತ್ತು. ಇದೀಗ ಶಾಸಕರ ಹಿತಾಸಕ್ತಿ ಹಾಗೂ ಅಧಿಕಾರಿಗಳ ಸಹಕಾರಿಂದ ಅಲ್ಲಿ ಸಾರ್ವಜನಿಕರಿಗಾಗಿ ಬಾಸ್ಕೆಟ್ ಬಾಲ್ ಗ್ರೌಂಡ್, ಓಪನ್ ಜಿಮ್, ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಈ ಅಭಿವೃದ್ಧಿ ಕೆಲಸಕ್ಕೆ 1 ಕೋಟಿ 75 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿತ್ತು. ಬುಧವಾರ ಪೂರ್ಣಗೊಂಡ ಕಾಮಗಾರಿಯನ್ನು ಶಾಸಕ ಅಮೃತ ದೇಸಾಯಿ ಹಾಗೂ ಮೇಯರ್ ಈರೇಶ ಅಂಚಟಗೇರಿ ಅವರು ಜಂಟಿಯಾಗಿ ಪರಿಶೀಲನೆ ಮಾಡಿದರು.

ಒಟ್ಟಾರೆಯಾಗಿ ಮದಿಹಾಳ ಭಾಗದ ಜನರ ಬಹುದಿನಗಳ ಕನಸು ನನಸಾಗಿದ್ದು, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ.

Edited By : Manjunath H D
Kshetra Samachara

Kshetra Samachara

01/06/2022 02:41 pm

Cinque Terre

22.47 K

Cinque Terre

2

ಸಂಬಂಧಿತ ಸುದ್ದಿ