ಧಾರವಾಡ: ನೆರೆ ಹಾವಳಿಯಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಗಳಿಗೆ ಧನಸಹಾಯ ಮಾಡಬೇಕಾದ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ನೆರೆಯಿಂದ 2019ರಲ್ಲಿ ಕುಸಿದು ಬಿದ್ದ ಮನೆಗಳಿಗೆ ನೀಡಬೇಕಾದ ಅನುದಾನ ನೀಡದೆ ಸಾರ್ವಜನಿಕರ ಕೆಂಗಣ್ಣಿಗೆ ಸಚಿವರು ಗುರಿಯಾಗಿದ್ದಾರೆ.
ಹೌದು, ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಇದೀಗ ಧಾರವಾಡದಲ್ಲಿ ರಾಮಸೇನಾ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಕದಂ ಆರೋಪಿಸಿದ್ದು, ಕಳೆದ ವರ್ಷ ಬಿದ್ದಿರುವ ಮನೆಗಳ ಹಣವನ್ನು ಈ ವರ್ಷ ಬಿಡುಗಡೆ ಮಾಡಿದ್ದಾರೆ. ಇನ್ನು, 2020 /21ರಲ್ಲಿ ಬಿದ್ದಿರುವ ಮನೆಗಳಿಗೆ ಒಂದು ಕಂತು ಮಾತ್ರ ಅಂದರೆ 95700 ಮಾತ್ರ ಬಿಡುಗಡೆ ಮಾಡಿ ಇದುವರೆಗೂ ಮತ್ತೆ ಯಾವುದೇ ಮುಂದಿನ ಕಂತಿನ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
ಬರೀ ವಿಧಾನಸೌಧದಲ್ಲಿ ಕುಳಿತು, ಬೊಬ್ಬೆ ಹೊಡೆದು "ನಾನು ಅದನ್ನು ಮಾಡಿದೆ, ನಾನು ಇದನ್ನು ಮಾಡಿದೆ. ಮನೆಮನೆಗೆ ಕಂದಾಯ ದಾಖಲೆ ನೀಡಿದೆ" ಅಂತ ಹೇಳೋದಲ್ಲ. ಸಣ್ಣಪುಟ್ಟ ಕೆಲಸ ಮಾಡಿ ಹೆಸರು ಮಾಡಿಕೊಳ್ಳುವುದನ್ನು ಬಿಟ್ಟು, ಬಡವರ ಕಷ್ಟ ನಷ್ಟಗಳಿಗೆ ಸ್ಪಂದಿಸಿ, ನೆರೆ ಹಾವಳಿಯಿಂದ ಬಿದ್ದ ಮನೆಗಳಿಗೆ ಮಂಜೂರಾದ ಹಣವನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ. ನಮ್ಮ ಈ ಮನವಿಯನ್ನು ನಿರ್ಲಕ್ಷಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ʼರಾಮ್ ಸೇನಾʼ ದಿಂದ ಸಚಿವರ ವಿರುದ್ಧ ಧಿಕ್ಕಾರದ ಕೂಗು ಮೊಳಗಲಿದೆಯೆಂದು ವಿಜಯ ಕದಂ ಎಚ್ಚರಿಕೆ ನೀಡಿದರು.
Kshetra Samachara
08/05/2022 05:31 pm