ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಹೀಗೆ ಆದ್ರೆ ಅಭಿವೃದ್ಧಿ ಹೇಗೆ : ಶಂಭು ಸಾಲಿಮನಿ

ಧಾರವಾಡ : ಹು-ಧಾರವಾಡ ಪಾಲಿಕೆ ಚುನಾವಣೆ ಆಗಿ ಏಳು ತಿಂಗಳು ಕಳೇದ್ರು, ಸದಸ್ಯರುಗಳಿಗೆ ಅಧಿಕಾರ ಕೋಡ್ತಿಲ್ಲ, ಯಾಕೆ ಕೋಡ್ತಿಲ್ಲ ಅಂತಾ ರಿಟ್ ಅರ್ಜಿ ಸಲ್ಲಿಸಿರುವೆ. ಆದರೆ, ಮೀಸಲಾತಿ ಸರಿಯಲ್ಲ ಎನ್ನುವ ನೆಪ ಮಾಡಿಕೊಂಡು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಹೀಗೆ ಆದರೆ ಅವಳಿನಗರ ಅಭಿವೃದ್ಧಿ ಆಗುವುದೆ ಹೇಗೆ ಎಂದು ಪಾಲಿಕೆ ಸದಸ್ಯ ಶಂಭು ಸಾಲಿಮನಿ ಪ್ರಶ್ನೆ ಎತ್ತಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ನಿಲುವು ಬರುವರೆಗೂ ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡಲ್ಲ ಎಂದು ಹೇಳಲಾಗುತ್ತಿದೆ. ಚುನಾಯಿತರಾದ ನಾವು ಕೇವಲ ಕಾರ್ಯಕ್ರಮಗಳಿಗೆ ಪಟ್ಟಿ ಕೊಡುವುದು, ಗಟಾರ ಸ್ವಚ್ಚಗೊಳಿಸುವುದು, ಬೀದಿ ದೀಪ ಅಳವಡಿಸುವ ಕಾರ್ಯಕ್ಕೆ ಸೀಮಿತವಾಗಿದ್ದೇವೆ. ಇದಲ್ಲದೆ ನಮ್ಮ ವಾರ್ಡ್ ಕೇವಲ 10 ಬೀದಿ ದೀಪಗಳನ್ನು ಕೊಟ್ಟಿದ್ದಾರೆ. ಅಧಿಕಾರಿಗಳು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಈ ರೀತಿ ಚುನಾಯಿತ ಪಾಲಿಕೆ ಸದಸ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

Edited By : Nagesh Gaonkar
Kshetra Samachara

Kshetra Samachara

17/04/2022 06:37 pm

Cinque Terre

136.81 K

Cinque Terre

3

ಸಂಬಂಧಿತ ಸುದ್ದಿ