ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಮ ವಾಸ್ತವ್ಯ ಓಕೆ, ಆದ್ರೆ ಪರಿಹಾರ ಯಾವಾಗ

ಕುಂದಗೋಳ: ತಹಶೀಲ್ದಾರರು ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ. ಇತರ ಅಧಿಕಾರಿಗಳು ಕೂಡ ಇದಕ್ಕೆ ಸಾಥ್ ನೀಡ್ತಿದ್ದಾರೆ. ಆದ್ರೆ ಎಲ್ಲ ಅಧಿಕಾರಿಗಳಿಂದ ಸಮಸ್ಯೆ ಆಲಿಕೆ ಆಗುತ್ತಿದೆ. ಜನರು ಕೂಡ ಮನವಿ ಸಲ್ಲಿಸುತ್ತಿದ್ದಾರೆ. ಆದ್ರೆ ಈ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತಿಲ್ಲ. ಕೇವಲ ಆಯ್ತು ನೋಡೋಣ, ಮಾಡೋಣ ಎಂಬ ಉತ್ತರ ನೀಡೋದ್ರಲ್ಲೇ ಗ್ರಾಮ ವಾಸ್ತವ್ಯ ಮುಗಿದು ಹೋಗುತ್ತಿದೆ.

ಹೆಸ್ಕಾಂ ಅಧಿಕಾರಿ ವೀರೇಶ್ ಮಠದ ವರದಿ ಓದುವಾಗ ಪ್ರಸ್ತಾಪವಾದ ಹಂಚಿನಾಳ ಗ್ರಾಮದ ಟಿ.ಸಿ ವಿದ್ಯುತ್ ಸಮಸ್ಯೆ ವಿಚಾರ ಎಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂಬುದು ತಿಳಿಯಿತು. ಬೆಳೆ ವಿಮೆ, ಕಿಸಾನ್ ಸಮ್ಮಾನ್ ಹಣದ ವಿಚಾರ ಎಲ್ಲೇಡೆಯಂತೆ ಸಾಮಾನ್ಯವಾದ್ರೂ ಅಧಿಕಾರಿಗಳ ಉತ್ತರ ಅದೇ ಆಗಿತ್ತು.

ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಪೌಷ್ಟಿಕ ಆಹಾರ ಕಾರ್ಯಕ್ರಮ ತಹಶೀಲ್ದಾರ ನೇತೃತ್ವದಲ್ಲಿ ಚಾಲನೆ ಪಡೆದು ಬಾಣಂತಿಯರಿಗೆ ಉಡಿ ತುಂಬುವ, ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ, ವೃದ್ಧಾಪ್ಯ ವೇತನ ಮಂಜೂರು ಪತ್ರ ನೀಡಿರುವುದು ಮಾತ್ರ ಸಭೆಗೆ ಶೋಭೆ ತಂದಿತು. ಬಳಿಕ ತಹಶೀಲ್ದಾರ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮದಲ್ಲಿ ಸಂಚರಿಸಿ ಮೂಲ ಸೌಕರ್ಯ ಪರಿಶೀಲಿಸಿದರು, ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಣೆ ಮಾಡಿದರು.

ಒಟ್ಟಾರೆ ತಹಶೀಲ್ದಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ 35 ಅರ್ಜಿಗಳು ಸಿಕೃತಿವಾಗಿ 4 ಅರ್ಜಿ ಸ್ಥಳದಲ್ಲಿ ವಿಲೇವಾರಿಯಾದವು.

Edited By : Shivu K
Kshetra Samachara

Kshetra Samachara

22/03/2022 11:17 am

Cinque Terre

23.69 K

Cinque Terre

2

ಸಂಬಂಧಿತ ಸುದ್ದಿ