ಕುಂದಗೋಳ : ಕಳೆದ ಎರಡು ವರ್ಷಗಳಿಂದ ದುರಸ್ತಿ ಹಂತದಲ್ಲಿರುವ ಶಿರೂರು ಬ್ರಿಡ್ಜ್ ಕಾಮಗಾರಿ ಮುಕ್ತಾಯ ಕಾಣದೆ ದಿನ ಕಳೆಯುತ್ತಿರುವುದನ್ನು ಖಂಡಿಸಿ, ಪಕ್ಷಾತೀತವಾಗಿ ಸಂಶಿ ಬಸ್ ನಿಲ್ದಾಣದಿಂದ ಲೋಕೋಪಯೋಗಿ ಇಲಾಖೆಯ ವರೆಗೆ ಸರ್ವ ಮುಖಂಡರ ನಿಯೋಗ ಪಾದಯಾತ್ರೆ ಕೈಗೊಂಡಿತು.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಕಳೆದ ಹಲವಾರು ದಿನಗಳಿಂದ ದುರಸ್ತಿ ಕಾರ್ಯ ನಡೆಯುತ್ತಿದೆ ವಿನಃ ಮುಕ್ತಾಯ ಕಂಡಿಲ್ಲಾ, ಇದೀಗ ಬ್ರಿಡ್ಜ್ ಸಂಚಾರ ಸ್ಥಗಿತಗೊಂಡ ಪರಿಣಾಮ ಜನ ಸಾಮಾನ್ಯರಿಗೆ ನಿತ್ಯ ಸಾರಿಗೆ ಸಮಸ್ಯೆ ಕಾಡುತ್ತಿದೆ.
ಒಂದು ವೇಳೆ ಬ್ರಿಡ್ಜ್ ಕಾಮಗಾರಿ ಶೀಘ್ರ ಮುಕ್ತಾಯ ಕಾಣದೆ ಇದ್ದಲ್ಲಿ ಶಿರೂರು ಬ್ರಿಡ್ಜ್ ಮೇಲೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
Kshetra Samachara
08/03/2022 08:31 am