ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೆಳೆಯುತ್ತಿರು ಹುಬ್ಬಳ್ಳಿಯಲ್ಲಿ ಹೋರಾಟಕ್ಕೆ ಬೇಕಿದೆ ಪ್ರತ್ಯೇಕ ಸ್ಥಳ

ಹುಬ್ಬಳ್ಳಿ: ವಾಣಿಜ್ಯನಗರಿಯು ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿದೆ. ದಿನ ಕಳೆದಂತೆ ವಾಹನ ಸಂಚಾರ,‌ ಸಾರ್ವಜನಿಕರ ಓಡಾಟ ಹೆಚ್ಚುತ್ತಲೇ ಹೋಗಿದೆ.ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಬೇಡಿಕೆಯ ಕೂಗು ಕೇಳಿ ಬಂದಿದೆ.

ಉತ್ತರ ಕರ್ನಾಟಕದ ಕೇಂದ್ರ ಭಾಗವಾಗಿರುವ ಹುಬ್ಬಳ್ಳಿಯಲ್ಲಿ ದಿನಕ್ಕೊಂದು ಹೋರಾಟ ಪ್ರತಿಭಟನೆ ಇದ್ದೇ ಇರುತ್ತದೆ. ಇನ್ನು ಹೋರಾಟ, ಪ್ರತಿಭಟನೆ ಅಂದರೆ ಎಲ್ಲ ಹೋರಾಟಗಾರರ ಕಣ್ಣು ಮುಂದೆ ಬರುವುದೇ ಕಿತ್ತೂರು ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಅಂಬೇಡ್ಕರ್ ಸರ್ಕಲ್. ಇಲ್ಲಿ ಪ್ರತಿಭಟನೆ ನಡೆಸುವುದರಿಂದ ಸಾಕಷ್ಟು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಧಾರವಾಡ ಜಿಲ್ಲಾಡಳಿತ ಪ್ರತಿಭಟನೆಗೆ ಹಾಗೂ ಹೋರಾಟಕ್ಕೆ ಪ್ರತ್ಯೇಕ ಜಾಗವನ್ನು ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.

ಇನ್ನೂ ಕೆಲವೊಂದು ಸಮಯಗಳಲ್ಲಿ ತುರ್ತು ಸಂಚಾರಕ್ಕೆ ಈ ಪ್ರತಿಭಟನೆಗಳು ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಿ ಹೋರಾಟಕ್ಕಾಗಿಯೇ ಪ್ರತ್ಯೇಕ ಜಾಗೆಯನ್ನು ಘೋಷಣೆ ಮಾಡುವ ಮೂಲಕ ಸಾರ್ವಜನಿಕರ ಹಿತವನ್ನು ಕಾಪಾಡಬೇಕಿದೆ. ಅಲ್ಲದೇ ಬಹುದೊಡ್ಡ ಮಟ್ಟದ ಹೋರಾಟದ ಸಂದರ್ಭದಲ್ಲಿ ಜನರು ಮಾರ್ಗ ಬದಲಾವಣೆಯಿಂದ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸೂಕ್ತ ಸ್ಥಳದ ವ್ಯವಸ್ಥೆ ಮಾಡಬೇಕಿದೆ ಎಂಬುವುದು ಹೋರಾಟಗಾರರ ಹಾಗೂ ಹುಬ್ಬಳ್ಳಿ ಜನರ ಆಗ್ರಹ.

Edited By : Manjunath H D
Kshetra Samachara

Kshetra Samachara

27/02/2022 03:54 pm

Cinque Terre

89.81 K

Cinque Terre

3

ಸಂಬಂಧಿತ ಸುದ್ದಿ