ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಅಕ್ರಮ ಮರುಳು ದಂಧೆಗೆ ಹೈರಾಣಾದ ರೈತರು: ಪೊಲೀಸ್ ಠಾಣೆಗೆ ಲಗ್ಗೆ ಇಟ್ಟ ಅನ್ನದಾತ

ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದೆ. ತಾಲೂಕಿನ ನಾದಿಗಟ್ಟಿ ಹಾಗೂ ಆದರಹಳ್ಳಿ ಸರಹದ್ದಿನ ರೈತರ ಜಮೀನಿನಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ರೈತರು ಬುಟ್ಟಿ ಸಲಕೆಗಳನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಹೌದು.. ಅಕ್ರಮ ಮರಳು ದಂಧೆಕೊರರು ರೈತರ ಜಮೀನುಗಳನ್ನು ಟಾರ್ಗೆಟ್ ಮಾಡಿಕೊಂಡು ಯಾರು ಇಲ್ಲದ ಸಂದರ್ಭದಲ್ಲಿ ಎಗ್ಗಿಲ್ಲದೆ‌ ಮರಳೆತ್ತುವ ಕಾರ್ಯ ನಡೆಯುತ್ತಿದೆ. ಗ್ರಾಮದಿಂದ ದೂರ ಇರುವ ಬಡ ರೈತರ ಜಮೀನುಗಳಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಅದೇ ರೀತಿಯಲ್ಲಿ ಆದರಹಳ್ಳಿ ಗ್ರಾಮದ ಯಂಕಪ್ಪ ಪರಸಪ್ಪ ಲಮಾಣಿ, ಥಾವರೆಪ್ಪ ಲಮಾಣಿ, ದೇವೆಂದ್ರಪ್ಪ ಲಮಾಣಿ, ಕೇಶಪ್ಪ ಲಮಾಣಿ, ದೀಪಲೆಪ್ಪ ಲಮಾಣಿ ಹೀಗೆ ಅನೇಕ ರೈತರ ಜಮೀನಿನ ಮರಳು ಲೂಟಿ ಮಾಡಿದ್ದಾರೆ. ಈ ಬಗ್ಗೆ ರೈತರು ಹೊಲಕ್ಕೆ ಹೋದಾಗ ಕೆಲವು ಮರಳು ಖದೀಮರು ರೈತರ ಕೈಗೆ ಸಿಕ್ಕು ಬಿದ್ದಿದ್ದಾರೆ.

ಮರಳು ಗಣಿಗಾರಿಕೆಗೆ ಸಂಬಂಧಿಸಿದ ಬುಟ್ಟಿ, ಸಲಿಕೆ, ಗುದ್ದಲಿ ಹೀಗೆ ಅನೇಕ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ರೋಷಿ ಹೋದ ರೈತರು ಮರಳು ಸಲಕರಣೆಗಳೊಂದಿಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದರು. ಅಕ್ರಮ ಮರಳು ದಂಧೆಕೊರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

04/12/2021 04:42 pm

Cinque Terre

27.6 K

Cinque Terre

0

ಸಂಬಂಧಿತ ಸುದ್ದಿ