ಹುಬ್ಬಳ್ಳಿ: ದುರ್ಗದಬೈಲ್ ವ್ಯಾಪಾರಸ್ಥರ ಹೆಬ್ಬಾಗಿಲು ಎಂದೇ ಖ್ಯಾತಿ ಹೊಂದಿದೆ. ಬ್ರಾಡ್‌ವೇ ಮಾರುಕಟ್ಟೆಯಲ್ಲಿನ ಮಹಾನಗರ ಪಾಲಿಕೆ ಮಾಲೀಕತ್ವದ ಕಟ್ಟಡ, ಶಿಥಿಲವಾದ ಅವ್ಯವಸ್ಥೆಯಿಂದ ಕೂಡಿದೆ ಎಂದು, ಪಾಲಿಕೆ ಕಟ್ಟಡದಲ್ಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಇದನ್ನು ಮಳಿಗೆ ಮಾಲೀಕರು ಕೊರೊನಾದಿಂದ ಎರಡು ವರ್ಷಗಳ ಕಾಲ ವ್ಯಾಪಾರ ಇಲ್ಲದೆ ಪರದಾಡಿದ್ದೇವೆ, ದಿಢೀರ್ ಆಗಿ ಖಾಲಿ ಮಾಡಿ ಅಂದರೆ ಹೇಗೆ? ನಮಗೆ ದೀಪಾವಳಿ ಹಬ್ಬದ ವರೆಗೆ ಅವಕಾಶ ಮಾಡಿಕೊಡಿ ಎಂದು ಮಾಧ್ಯಮದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗೆ, ಪಾಲಿಕೆ ಆಯುಕ್ತರಿಗೆ ಮನವಿ ಮನವಿ ಮಾಡಿದ್ದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಪ್ರತಿಕ್ರಿಯೆ ನೀಡಿ, ಇಲ್ಲಿಯವರೆಗೆ ನನಗೆ ಮನವಿ ಯಾವುದು ಬಂದಿಲ್ಲ, ಮಾಧ್ಯಮದ ಮೂಲಕ ತಿಳಿದು ಬಂದಿದೆ. ಮನವಿ ಬಂದ ಕೂಡಲೆ ಪಾಲಿಕೆ ಆಯುಕ್ತರ ಜೊತೆ ಮಾತನಾಡಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
Kshetra Samachara
16/10/2021 01:01 pm