ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉನಕಲ್ ಕೆರೆಗೆ ಚನ್ನ ಬಸವ ಸಾಗರ ಎಂದು ನಾಮಫಲಕ ಅಳವಡಿಸಿದ ಯುಜೆಎಸ್

ಹುಬ್ಬಳ್ಳಿ: ಕೆಲವು ವರ್ಷಗಳ ಹಿಂದೆಯ ಹುಬ್ಬಳ್ಳಿ ಉಣಕಲ್ ಕೆರೆಯನ್ನು 'ಚನ್ನ ಬಸವ ಸಾಗರ ಎಂದು ಮಹಾನಗರ ಪಾಲಿಕೆ ನಾಮಕರಣ ಮಾಡಿದರು ಸಹ, ನಾಮಫಲಕ ಹಾಕದೆ ನಿರ್ಲಕ್ಷ್ಯ ವಹಿಸಿದ್ದರು. ಹಾಗೂ ಸ್ಟೇಷನ್ ರಸ್ತೆಯ ಸರ್ದಾರ್ ಮೆಹಬೂಬ್ ಅಲಿ ಖಾನ್ ರೋಡ್ ನಾಮ ಫಲಕ ಶಿಥಿಲವಾಗಿದ್ದರು, ಪಾಲಿಕೆ ಸೂಕ್ತ ಕೆಲಸ ಮಾಡದೆ ಇದ್ದ ಕಾರಣ, ಇದನೆಲ್ಲವನ್ನೂ ಮನಗಂಡ ಉತ್ತರ ಕರ್ನಾಟಕ ಜನಶಕ್ತಿ ಸೇನಾ ಅಧ್ಯಕ್ಷ ಎಸ್ ಎಸ್ ಶಂಕರಣ್ಣ ಅವರು, ಗುರು ಹಿರಿಯರ ಸಂಯೋಗದೊಂದಿಗೆ, ಇಂದು ವಿಜಯ ದಶಮಿ ನಿಮಿತ್ತವಾಗಿ, ಚನ್ನ ಬಸವೇಶ್ವರ ಸಾಗರವೆಂದು ಉಣಕಲ್ ಕೇರಿಗೆ, ಹಾಗೂ ಸ್ಟೇಷನ್ ರಸ್ತೆಗೆ ಸರ್ದಾರ್ ಮೆಹಬೂಬ್ ಅಲಿ ಖಾನ್ ರಸ್ತೆ ಎಂದು ನಾಮಫಲಕ ಅಳವಡಿಸಿದರು.

ಕೆರೆಯ ದಂಡೆಯ ಮೇಲೆ ಉಳವಿ 'ಶ್ರೀ ಚನ್ನಬಸವಣ್ಣನವರ ಐತಿಹಾಸಿಕ ತ್ಯಾಗಕ್ಕಾಗಿ ಹಾಗೂ ವಚನಗಳ ರಕ್ಷಣೆಗಾಗಿ 196 ಅಡಿ ಎತ್ತರದ ಮೂರ್ತಿಯನ್ನು ಹಾಗೂ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

Edited By : Shivu K
Kshetra Samachara

Kshetra Samachara

15/10/2021 04:00 pm

Cinque Terre

31.93 K

Cinque Terre

3

ಸಂಬಂಧಿತ ಸುದ್ದಿ