ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ- ಗೋಲ್ಡನ್ ಟೌನ್ ಬಡಾವಣೆ ಎಂದು ಹೆಸರು ಕೇಳಿದರೆ ಸಾಕು, ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರಬಹುದು ಎಂಬುವುದು ಎಲ್ಲರ ಕಲ್ಪನೆ. ಆದರೆ ಇಲ್ಲಿನ ವ್ಯವಸ್ಥೆ ನೋಡಿದರೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಈಗ ಎದುರಾಗಿದೆ.
ಹೌದು,,,, ನಗರದ ಹೊಸೂರ ಬಳಿ ಇರುವ, ಶಕುಂತಲಾ ನರ್ಸಿಂಗ್ ಹೋಮ್ ಹಿಂಭಾಗದ ಗೋಲ್ಡನ್ ಬಡಾವಣೆಯ ರಸ್ತೆಯು ಸಂಪೂರ್ಣ ಕಸದಿಂದ ತುಂಬಿ ಹೋಗಿದೆ. ಇಲ್ಲಿ ಇರುವುದು ಒಂದೇ ರಸ್ತೆ, ಆದರೆ ಅದೇ ರಸ್ತೆಯ ಮಧ್ಯದಲ್ಲಿಯೇ ಕಸದ ರಾಶಿಯೇ ಹಾಕಿದ್ದಾರೆ. ಇಲ್ಲಿನ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ, ಮತ್ತು ನೂತನವಾಗಿ ವಾರ್ಡ್ ನಂ. 48 ರ ಪಾಲಿಕೆ ಸದಸ್ಯ ಕಿಶನ್ ಬೆಳಗಾವಿಗೆ ತಿಳಿಸಿದರು ಕೂಡ, ಯಾರು ಕ್ಯಾರೆ ಎನ್ನುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಗರಂ ಆಗಿದ್ದಾರೆ.
ಜನರಿಗೆ ಭರವಸೆ ನೀಡಿ ಮತ ಹಾಕಿಸಿಕೊಂಡ ಆ ಜನ ನಾಯಕ, ಆರಿಸಿ ಬಂದ ಮೇಲೆ ನಿಮ್ಮ ಸಮಸ್ಯೆಗೆ ನಾವು ಸಿದ್ಧ ಎಂದು ಹರಿಕತೆ ಹೇಳಿ ಮತ ಹಾಕಿಸಿಕೊಳ್ಳುತ್ತಾರೆ. ಆದರೆ ಆಯ್ಕೆ ಆದ ನಂತರ ನಿವುಂಟು ನಿಮ್ಮ ಸಮಸ್ಯೆ ಉಂಟೆಂದು ತಿರುಗಿ ನೋಡದೆ ಹೋಗುತ್ತಾರೆ. ಇಲ್ಲಿ ಬೀದಿ ಹಸು ಮತ್ತು ನಾಯಿಗಳು ಪ್ಲಾಸ್ಟಿಕ್ ತಿಂದು ಸಾವನ್ನಪ್ಪುತ್ತಿವೆ. ಇದರಿಂದ ಬಡಾವಣೆಯ ಜನರಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದ್ದು. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗೆ ನಾಂದಿ ಹಾಡಬೇಕಿದೆ.
Kshetra Samachara
12/10/2021 03:15 pm