ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಎನ್.ಪಿ.ಎಸ್ ರದ್ದುಗೊಳಿಸಿ ನಮ್ಮ ಭವಿಷ್ಯ ಕಾಪಾಡಿ..!

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಅಂಚೆ ಕಚೇರಿ ಎದುರಿಗೆ ಎನ್.ಪಿ.ಎಸ್ ನೌಕರರ ಸಂಘದ ವತಿಯಿಂದ ಎನ್.ಪಿ.ಎಸ್ ರದ್ದತಿಯ ಬಗ್ಗೆ ಮಾಧ್ಯಮ ಸುದ್ದಿ ಪ್ರಸಾರ ಮಾಡುವಂತೆ ಮಾಧ್ಯಮ ಕಚೇರಿಗಳಿಗೆ ಪತ್ರ ಚಳುವಳಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ , ರಾಜ್ಯ ಸರ್ಕಾರಿ ನೌಕರರಲ್ಲಿ 2006 ನಂತರದಲ್ಲಿ ನೇಮಕಗೊಂಡವರಿಗೆ ಅಳವಡಿಸಿರು ಅವೈಜ್ಞಾನಿಕ ನೂತನ ಪಿಂಚಣಿ ಯೋಜನೆ( NPS) ರದ್ದುಗೊಳಿಸಬೇಕು, ನೌಕರರ ಸಂದ್ಯಾಕಾಲದ ಜೀವನಕ್ಕೆ ಮಾರಕವಾಗಿದೆ. ಕಾರಣ ಈ ಯೋಜನೆಯ ಸಾಧಕ ಬಾಧಕಗಳನ್ನು ತಮ್ಮ ವಾಹಿನಿಯಲ್ಲಿ ತಜ್ಞರ ಕರೆಯಿಸಿ ಚರ್ಚಿಸಿ ಬಿತ್ತರಿಸುವದರ ಮೂಲಕ ಮಾರಕವಾಗಿರುವ ಈ ಪಿಂಚಣಿ ಯೋಜನೆಯನ್ನು ರದ್ದು ಪಡಿಸುವಂತೆ ಸರ್ಕಾರದ ನಮನ ಸೆಳೆಯಲು ಎನ್.ಪಿ.ಎಸ್ ನೌಕರರ ಪರವಾಗಿ ತಮ್ಮ ಸಹಾಯ ಹಸ್ತ ಕೊರಿ ಎನ್.ಪಿ.ಎಸ್ ಯೋಜನೆ ನಿರ್ಮೂಲನೆಗಾಗಿ ಮಾದ್ಯಮ ಕಚೇರಿಗಳಿಗೆ ಪತ್ರ ಕಳಿಸುವ ಮೂಲಕ ಪ್ರತಿಭಟನೆ ನಡೆಸಿದರು.

Edited By : Manjunath H D
Kshetra Samachara

Kshetra Samachara

30/09/2021 07:58 pm

Cinque Terre

31.89 K

Cinque Terre

1

ಸಂಬಂಧಿತ ಸುದ್ದಿ