ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರಿಸಿ ಬಂದರೂ ಆಶ್ವಾಸನೆ ಕೊಡುವುದೇ ಆಗಿದೆ ಅಧಿಕಾರವೇ ಇಲ್ಲ: ಮೇಯರ್, ಉಪಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿಲ್ಲ...!

ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಅದು‌ ಎರಡು ವರ್ಷ ಒಂಬತ್ತು ತಿಂಗಳಿಂದ ಯಾವುದೇ ಚುನಾಯಿತ ಪ್ರತಿನಿಧಿಗಳಿಲ್ಲದೇ ಉಳಿದಿದ್ದ ಪಾಲಿಕೆ. ಈ ಪಾಲಿಕೆಗೆ ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ ಅಂತ ಕೂಡ ಹೆಸರು‌.‌ ಆದರೆ ಚುನಾವಣೆ ನಡೆದು ತಿಂಗಳಾಗುತ್ತಾ ಬಂದರೂ ಚುನಾಯಿತ ಪ್ರತಿನಿಧಿಗಳು ಮಾತ್ರ ಪಾಲಿಕೆಯತ್ತ ಬರುತ್ತಲೇ ಇಲ್ಲ. ಅವರು ಬರಬೇಕು ಅಂದರೂ ಅವರ ಕೈಯಲ್ಲಿ ಮಾತ್ರ ಅಧಿಕಾರ ಇಲ್ಲ ಏನಿದು ಟ್ವಿಸ್ಟ್ ಅಂತೀರಾ ಹೇಳ್ತಿವಿ ನೋಡಿ ಇಂಟ್ರಸ್ಟಿಂಗ್ ಸ್ಟೋರಿ...

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ ಏನೋ ನಿಜ ಆದರೆ. ಇಲ್ಲಿ ಚುನಾಯಿತ ಪ್ರತಿನಿಧಿಗಳು ಮಾತ್ರ ಅಧಿಕಾರ ವಹಿಸಿಕೊಂಡಿಲ್ಲ. ಹೌದು..67 ವಾರ್ಡ್ ನಿಂದ 82 ವಾರ್ಡ್ ಗಳಾಗಿ ವಿಸ್ತರಣೆ ಮಾಡಿ ಚುನಾವಣೆ ಮುಗಿಸಿದ ರಾಜ್ಯ ಚುನಾವಣೆ ಆಯೋಗ ಈಗ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮಾತ್ರ ಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ. ಅಲ್ಲದೇ ಈ ಹಿಂದೆ ಮೀಸಲಾತಿ ಪ್ರಕಟಿಸಿದ್ದರೂ ಕೂಡ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ದಿನಾಂಕ ಪ್ರಕಟಿಸದೇ ಇರುವುದು ಈಗ ಚುನಾಯಿತ ಪ್ರತಿನಿಧಿಗಳಲ್ಲಿ ಗೊಂದಲ ಉಂಟಾಗಿದೆ.

ಜನರು ಮಾತ್ರ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ ಚುನಾವಣೆ ನಡೆದು ಇಷ್ಟು ದಿನಗಳಾದರೂ ಕೂಡ ಅಧಿಕಾರ ವಹಿಸಿಕೊಳ್ಳದೇ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕದೇ ಇರುವುದು ಮತದಾರರಲ್ಲಿ ನಿರಾಸೆ ಭಾವನೆ ಮೊಳಕೆ ಒಡೆದಿದೆ. ಇನ್ನೂ ಚುನಾವಣಾ ಆಯೋಗ ಮಾತ್ರ ಯಾವುದೇ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಚುನಾಯಿತ ಪ್ರತಿನಿಧಿಗಳು ಕೇವಲ ಜನರ ಕಷ್ಟಗಳನ್ನು ಕೇಳಲು ವಾರ್ಡ್ ಭೇಟಿ ನೀಡಬೇಕಾಗಿದೆ. ಆದರೆ ಅಧಿಕಾರ ಮಾತ್ರ ಕೈಯಲ್ಲಿ ಇಲ್ಲ. ಇನ್ನೂ ಪಾಲಿಕೆ ಆಯುಕ್ತರು ಮೂಡ ಚುನಾವಣೆ ಆಯೋಗದ ಮೇಲೆಯೇ ಜವಾಬ್ದಾರಿ ಇದೆ ಅನ್ನುತ್ತಾರೆ. ಕೂಡಲೇ ರಾಜ್ಯ ಚುನಾವಣಾ ಆಯೋಗ ಮೇಯರ್ ಉಪಮೇಯರ್ ಆಯ್ಕೆಗೆ ದಿನಾಂಕ ನಿಗದಿ ಮಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

21/09/2021 06:19 pm

Cinque Terre

41.83 K

Cinque Terre

1

ಸಂಬಂಧಿತ ಸುದ್ದಿ