ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚಾಕಲಬ್ಬಿಯಲ್ಲಿ ನರೇಗಾ ಕಾಮಗಾರಿ ಹಬ್ಬ ಶಾಸಕಿ ಕುಸುಮಾವತಿ ಭೇಟಿ

ಕುಂದಗೋಳ : ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನರೇಗಾ ಕಾಮಗಾರಿ ಕೂಲಿ ಆರಂಭವಾಗಿದ್ದು ಚಾಕಲಬ್ಬಿ ಗ್ರಾಮದ ಕೆರೆ ಸ್ವಚ್ಛತೆಗೆ ಬರೋಬ್ಬರಿ 280 ಜನರು ನರೇಗಾ ಕೂಲಿಯಲ್ಲಿ ಭಾಗಿಯಾಗಿ ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ಕಳೆದ ಹಲವಾರು ದಿನಗಳಿಂದ ಗ್ರಾಮೀಣ ಮಹಿಳೆಯರು ಕೆಲಸವಿಲ್ಲದೆ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದಿರುವುದರಿಂದ,ನರೇಗಾ ಕೂಲಿ ಕೆಲಸ ಸಮಸ್ಯೆಗಳಿಗೆ ಪುಲ್ಸ್ಟಾಪ್ ಇಟ್ಟಿದೆ. ಇದೀಗ ಎಲ್ಲರೂ ಆಸಕ್ತಿ ವಹಿಸಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಮ್ಮೂರ ಕೆರೆ ಸ್ವಚ್ಛತೆಗೆ ಇಚ್ಚಾಶಕ್ತಿ ತೋರಿದ್ದಾರೆ.

ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು 280 ಕೂಲಿಕಾರರಿಗೆ ಸತತ 5 ದಿನಗಳಿಂದ ಕೆಲಸ ನೀಡಿದ್ದು ಶಾಸಕಿ ಕುಸುಮಾವತಿ ಶಿವಳ್ಳಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರ ಮಾತನ್ನ ಆಲಿಸಿ ಹೆಚ್ಚಿನ ಮೊತ್ತದ ನರೇಗಾ ಕಾಮಗಾರಿ ಯೋಜನೆಯನ್ನು ಗ್ರಾಮಕ್ಕೆ ನೀಡುವ ವಿಶ್ವಾಸ ತುಂಬಿದ್ದಾರೆ.

Edited By : Shivu K
Kshetra Samachara

Kshetra Samachara

21/09/2021 01:41 pm

Cinque Terre

33.03 K

Cinque Terre

1

ಸಂಬಂಧಿತ ಸುದ್ದಿ