ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 73 ರ ವ್ಯಾಪ್ತಿಯಲ್ಲಿ ಬರುವ, ಕಾರವಾರ ರಸ್ತೆಯಲ್ಲಿ ಕಳೆದ ಹಲವಾರು ದಿನಗಳಿಂದ ಚರಂಡಿಗಳು ಮುಚ್ಚಿಕೊಂಡು ಸಿದ್ದಾರೂಢ ಮಠದ ಮುಖ್ಯ ದ್ವಾರಬಾಗಿಲದ ಎದುರೆ ಧಾರಾಕಾರವಾಗಿ ಹರಿಯುತ್ತಿರುವ ಪರಿಣಾಮ, ಶ್ರೀಮಠಕ್ಕೆ ಚರಂಡಿ ನೀರು ತುಳಿದುಕೊಂಡೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲದೆ, ಅರ್ಧದಷ್ಟು ಚರಂಡಿ ನೀರಿನಿಂದ ತುಂಬಿರುವದರಿಂದ, ಅಲ್ಲಿನ ನಿವಾಸಿಗಳು ಪಾಲಿಕೆ ಸದಸ್ಯೆ ಶೀಲಾ ಕಾಟಕರ ಅವರ ಪೋಟೋವನ್ನು ಹಾಕಿ ವಿಡಿಯೋ ಎಡಿಟ್ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಈ ರಸ್ತೆಯಲ್ಲಿ ತಗ್ಗು ದಿನ್ನೆ ಜತೆ ಸದಾ ಚರಂಡಿ ನೀರು ಹರಿಯುತ್ತದೆ. ಇದರಿಂದ ರಸ್ತೆಯಲ್ಲಿ ಹೋಗುವವರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅದೇ ಮಾರ್ಗವಾಗಿ ಸಂಚರಿಸುವ ಹೋಗುವ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಚರಂಡಿ ನೀರು ಮುಳುವಾಗಿದೆ. ರಸ್ತೆ ತಗ್ಗಿನಲ್ಲಿ ನೀರು ನಿಂತರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿತ್ಯ ನೂರಾರು ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ನಡು ರಸ್ತೆಯಲ್ಲಿ ಬಿದ್ದಿರುವ ತಗ್ಗಿನಲ್ಲಿ ಚರಂಡಿ ನೀರು ವಾಹನ ಅರ್ಧದಷ್ಟು ಮುಳುಗುವ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಹೋಗಬೇಕು ಎಂದರೆ ತಪ್ಪದೇ ಸರ್ಕಸ್ ಮಾಡಬೇಕು. ಇಡೀ ರಸ್ತೆ ತುಂಬಾ ಚರಂಡಿ ನೀರು ತುಂಬಿರುವದರಿಂದ ಎಲ್ಲಿಯೂ ಅಪ್ಪಿ ತಪ್ಪಿ ಕಾಲಿಡುವ ಹಾಗಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಗ್ಯಾರಂಟಿ ಎನ್ನುತ್ತಾರೆ ವಾಹನ ಸವಾರರು.ಮುಂದಿನ ದಿನಗಳಲ್ಲಿ ರಸ್ತೆ ಸುಧಾರಣೆ ಮಾಡದೆ ಹೋದ್ರೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Kshetra Samachara
20/09/2021 03:18 pm