ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
ಹುಬ್ಬಳ್ಳಿ: ಕೇಂದ್ರದಿಂದ ಬರುವ ರಸ್ತೆ ನಿಧಿ ಸದ್ಯ ಹೋಲ್ಡ್ ಆಗಿದೆ. ಕೋಟಿ ಕೋಟಿ ಹಣವನ್ನು ಕೇಂದ್ರದಿಂದ ನಿಧಿಯ ಮೂಲಕ ತರಬೇಕಿದ್ದ ರಾಜ್ಯ ಸಚಿವರು ಸದ್ಯ ಕೇಂದ್ರದ ನಿಧಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಪಬ್ಲಿಕ್ ನೆಕ್ಸ್ಟ್ ವರದಿಯ ನಂತರ ಸಚಿವರಿಂದ ಭರವಸೆ ಸಿಕ್ಕಿದೆ.
ಹೀಗೆ ರಸ್ತೆಯ ಮಧ್ಯದಲ್ಲಿ ಉತ್ತಮ ದಾರಿ ಹುಡುಕುತ್ತಾ ಸಾಗುತ್ತಿರುವ ವಾಹನ ಸವಾರರು. ದಾರಿ ತುಂಬೆಲ್ಲಾ ತಗ್ಗು ದಿಣ್ಣೆ. ಇದೆ ರಸ್ತೆ ಸರಿಯಾಗಿ ಆಗಿದ್ದರೆ ವಾಹನ ಸವಾರರು ಸುಗಮವಾಗಿ ರಸ್ತೆ ಸಂಚಾರ ಮಾಡಬಹುದಿತ್ತು. ಆದರೆ ಹುಬ್ಬಳ್ಳಿ-ಧಾರವಾಡ ಜನರ ಸ್ಥಿತಿ ಸಂಪೂರ್ಣ ಅಯೋಮಯವಾಗಿದೆ. 2016ರಲ್ಲಿ ಸಿ.ಆರ್.ಎಫ್ ಅಂದರೆ ಕೇಂದ್ರ ರಸ್ತೆ ನಿಧಿಯಿಂದ 445 ಕೋಟಿ ರೂಪಾಯಿ ವೆಚ್ಚದಲ್ಲಿ 16 ಪ್ರಮುಖ ರಸ್ತೆಗಳನ್ನ ಆಯ್ಕೆ ಮಾಡಲಾಗಿದೆ. ಅವುಗಳ ಕೆಲಸ ಸಹ ನಡೆಯುತ್ತಿದೆ. ಆದರೆ ಯಾವಾಗ ಅಂತ್ಯ ಕಾಣುತ್ತದೆ ಎನ್ನುವುದೇ ಸ್ಥಳೀಯರ ಪ್ರಶ್ನೆಯಾಗಿದೆ. ಕೆಲಸ ಆರಂಭವಾಗಿ ಇಷ್ಟೊಂದು ವರ್ಷವಾದರೂ ಯಾಕೆ ಅಂತ್ಯ ಕಾಣುತ್ತಿಲ್ಲ ಎನ್ನುವ ಪ್ರಶ್ನೆಗೆ ಇನ್ನೂ ಸಿ.ಆರ್.ಎಫ್ ನಿಧಿಯೇ ರಾಜ್ಯ ಸರ್ಕಾರದ ಕೈ ಸೇರಿಲ್ಲ
ಹೌದು.. ಕೇಂದ್ರದಿಂದ ಬರಬೇಕಿದ್ದ ಒಟ್ಟು 326 ಕೋಟಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ ಒಟ್ಟು 7ಕ್ಕೂ ಹೆಚ್ಚು ರಸ್ತೆಗಳು ಸಂಪೂರ್ಣ ಕಾಮಗಾರಿಯಾಗದೆ ಅರ್ಧಕ್ಕೆ ನಿಂತಿವೆ. ರಸ್ತೆ ಕಾಮಗಾರಿ ಟೆಂಡರ್ ಪಡೆದಿದ್ದ ಗುತ್ತುಗೆದಾರರೂ ಸರ್ಕಾರದ ಹಣವನ್ನು ಸಂಪೂರ್ಣ ಖರ್ಚು ಮಾಡಿದ್ದು, ಉಳಿದ ಕಾಮಗಾರಿ ಮಾಡದೆ ಹಾಗೆಯೇ ನಿಲ್ಲಿಸಿದ್ದಾರೆ. ಹಣ ಬಿಡುಗಡೆಯಾದರೇ ಸಾಕು ಕಾಮಗಾರಿ ಆರಂಭ ಮಾಡ್ತೀವಿ ಅಂತ ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ರಸ್ತೆ ಕಾಮಗಾರಿಯ ಅಧ್ವಾನವನ್ನು ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ನೂತನ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಗಮನಕ್ಕೂ ತಂದಿದ್ದು, ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಶೀಘ್ರದಲ್ಲೇ ಮಾತನಾಡುತ್ತೇನೆ. ಬಾಕಿ ಇರುವ ಎಲ್ಲ ನಿಧಿಯನ್ನೂ ಆದಷ್ಟು ಬೇಗ ಪಡೆಯುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ.
Kshetra Samachara
16/08/2021 07:23 pm