ಅಳ್ನಾವರ: ಅಳ್ನಾವರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 'ಶುದ್ಧ ಕುಡಿಯುವ ನೀರಿನ ಘಟಕ' ವನ್ನು ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಎಸ್,ವಿ ಸಂಕನೂರು ರವರು ಉದ್ಘಾಟಿಸಿದರು.
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿ,ಎ ಮತ್ತು ಬಿ,ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ರಿಬ್ಬನ್ ಕಟ್ ಮಾಡುವ ಮೂಲಕ ಶುದ್ಧ ಕುಡಿಯುವ ನೀರಿನ ಘಟಕ ವನ್ನು ಉದ್ಘಾಟಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕಲಿಯಲು ಯಾವ ಹಂಗು ಇಲ್ಲ,ಯಾವುದರ ಕೊರತೆಯು ಕಾಡುವುದಿಲ್ಲ.ವಿದ್ಯಾರ್ಥಿಗಳಿಗೆ ಕಲಿಯುವ ಹಂಬಲ,ಹಸಿವು ಏಕಾಗ್ರತೆ ಮುಖ್ಯ.ಅಬ್ದುಲ್ ಕಲಾಂ ಅವರು ಕೂಡ ಕಡು ಬಡತನದಲ್ಲೇ ಬೆಂದು ಬೆಳೆದವರು.ಅವರ ಕಲಿಕೆಗೆ ಬಡತನ ಅಡ್ಡಿ ಮಾಡಲಿಲ್ಲ. ಮುಂದೊಂದು ದಿನ ಇಡಿ ದೇಶವೇ ಮೆಚ್ಚುವಂತ ವ್ಯಕ್ತಿ ಯಾಗಿ ವಿಜ್ಞಾನಿ ಯಾಗಿ ಭಾರತದ ರಾಷ್ಟ್ರಪತಿಯಾದರು ಎಂದು ಹೇಳಿದರು.
ಸಮಾರಂಭದಲ್ಲಿ ಎಂ,ಎಸ್ ಐ,ಎಲ್ ಅಧ್ಯಕ್ಷ ರಾದ ಶಿವಾಜಿ ಡೊಳ್ಳಿನ,ಕಾಲೇಜಿನ ಪ್ರಾಂಶುಪಾಲ ರಾದ ಸಿ,ಎನ್ ಹೊಂಬಾಳಿ,ಎಂ,ಸಿ ಹಿರೇಮಠ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Kshetra Samachara
08/08/2021 12:37 pm