ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಡನಾಳ ಗ್ರಾಮದಲ್ಲಿ ಹಜ್ ಭವನ ನಿರ್ಮಾಣ ಕೈ ಬಿಡಬೇಕು- ನಜೀರ್ ಅಹ್ಮದ್ ಹೊನ್ಯಾಳ ಒತ್ತಾಯ

ಹುಬ್ಬಳ್ಳಿ: ಯಾವುದೇ ಮುಸ್ಲಿಂ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಮಹಾನಗರ ಪಾಲಿಕೆ ಬಿಡನಾಳ ಗ್ರಾಮದಲ್ಲಿ, ಹಜ್ ಭವನ ನಿರ್ಮಾಣ ಮಾಡಲು ಹೊರಟ್ಡಿದ್ದು, ಇದನ್ನು ಕೂಡಲೇ ಕೈಬಿಡಬೇಕೆಂದು ಎಐಎಂಐಎಂ ಪಕ್ಷದ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಹುಬ್ಬಳ್ಳಿಯಲ್ಲಿ ಹಜ್ ಭವನ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡನಾಳ ಗ್ರಾಮದ ಸರ್ವೇ ನಂ 45, 46 ರಲ್ಲಿ ಹು-ಧಾ ಮಹಾನಗರ ಪಾಲಿಕೆ 1 ಎಕರೆ 20 ಗುಂಟೆ ಜಾಗದಲ್ಲಿ ಹಜ್ ಭವನ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಈ ಸ್ಥಳದಲ್ಲಿ ಬೃಹತ್ ಗಾತ್ರದ ವಿದ್ಯುತ್ ಹೈಟೇನಶನ ಲೈನುಗಳು, ಒಳಚರಂಡಿ ನಾಲಾ, ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶವಿಲ್ಲ.

ಅಲ್ಲದೇ ಈ ಜಾಗಕ್ಕೆ ಹೊಂದಿಕೊಂಡು ಬಿಡಿ ಕಾರ್ಮಿಕರ 380 ಮನೆಗಳಿಗೆ ಅವರಿಗೆ ನಗರದಲ್ಲಿ ಸಮುದಾಯ ಭವನ, ಶಾಲೆ, ಆಸ್ಪತ್ರೆ ಇಲ್ಲ. ಸದರಿ ಜಾಗೆಯಲ್ಲಿ ಇಲ್ಲಿನ ನಾಗರಿಕರಿಗೆ ಅನುಕೂಲಕ್ಕಾಗಿ ಉಪಯೋಗಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಅಂಜುಮನ್ ಏ ಇಸ್ಲಾಂ ಸಂಸ್ಥೆ ಸದರಿ ಜಾಗದಲ್ಲಿ ಹಜ್ ಭವನ ನಿರ್ಮಾಣ ಬೇಡವೆಂದು ಮನವಿ ಮಾಡಿದರು ಅದನ್ನು ಪರಿಗಣಿಸದೇ ಸದರಿ ಉದ್ದೇಶಿತ ಜಾಗೆಯಲ್ಲಿ ಹಜ್ ಭವನ ನಿರ್ಮಿಸಲು ಹೊರಟಿಸುವುದು ಖಂಡನೀಯ. ಇದನ್ನು ಎಐಎಂಐಎಂ ಪಕ್ಷ ಬಲವಾಗಿ ಖಂಡಿಸುತ್ತದೆ ಕೂಡಲೇ ಸದರಿ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

29/07/2021 01:14 pm

Cinque Terre

29.22 K

Cinque Terre

0

ಸಂಬಂಧಿತ ಸುದ್ದಿ