ಹುಬ್ಬಳ್ಳಿ: ಹುಬ್ಬಳ್ಳಿಯ ವಾರ್ಡ್ ನಂ 44 ರ ತೊರವಿ ಹಕ್ಕಲಿನ ದುರ್ಗಾದೇವಿ ದೇವಾಲಯದ ಎದುರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ , ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಳೆ ಎನ್.ಹೆಚ್. ರಸ್ತೆಯಿಂದ ಚೆನ್ನಪೇಟೆ ಸಂಪರ್ಕಿಸುವ ಹಾಗೂ ತೊರವಿ ಹಕ್ಕಲಿನ 2 ಒಳ ರಸ್ತೆಗಳನ್ನು ಕಾಂಕ್ರೀಟ್ ನಿಂದ ನಿರ್ಮಿಸಲಾಗುತ್ತಿದೆ.
ನಂತರ ಸಚಿವರು ಲಿಂಗರಾಜ ನಗರದ ಅತ್ತಿಗಿರಿ ಲೇ ಔಟ್ ನಲ್ಲಿ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ, ಕಲ್ಯಾಣನಗರ ರಂಗಮಂದಿರ ಬಳಿ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡ್ರೇನ್ ವರ್ಕ್ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಕಲ್ಯಾಣ ನಗರ ನಿವಾಸಿಗಳ ಸಂಘ ಸದಸ್ಯರು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
Kshetra Samachara
01/03/2021 05:18 pm