ಅಣ್ಣಿಗೇರಿ: ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.
ಇನ್ನು ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ವಿವಿಧ ಜನಪರ ಯೋಜನೆಗಳ ಕುರಿತು ವಿವರವಾಗಿ ಚರ್ಚಿಸಿ, ಅಧಿಕಾರಿಗಳಿಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ವಿವರ ಪಡೆದರು. ಈ ವೇಳೆ ಅಧಿಕಾರಿಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಣ್ಣಿಗೇರಿ ತಾ.ಪಂ.ಅಧ್ಯಕ್ಷರಾದ ದೇವಿಂದ್ರಪ್ಪ ರೋಣದ, ಉಪಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಗಾಣಿಗೇರ, ನವಲಗುಂದ ತಾ.ಪಂ.ಅಧ್ಯಕ್ಷರಾದ ಅನ್ನಪೂರ್ಣ ಶಿರಹಟ್ಟಿಮಠ, ಉಪಾಧ್ಯಕ್ಷರಾದ ಕಲ್ಲಪ್ಪ ಹುಬ್ಬಳ್ಳಿ, ಜಿ.ಪಂ.ಸದಸ್ಯರಾದ ರೇಣುಕಾ ಇಬ್ರಾಹಿಂಪುರ, ತಾ.ಪಂ.ಸದಸ್ಯರಾದ ವೆಂಕಮ್ಮ ಚಾಕಲಬ್ಬಿ, ಮಲ್ಲಪ್ಪ ಕುರಹಟ್ಟಿ, ನವಲಗುಂದ ತಹಶೀಲ್ದಾರಾದ ನವೀನ್ ಹುಲ್ಲೂರ, ಅಣ್ಣಿಗೇರಿ ತಹಶೀಲ್ದಾರರಾದ ಕೊಟ್ರೇಶ ಗಾಳಿ, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
18/02/2021 05:52 pm