ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ರಾಜ್ಯಾದ್ಯಂತ "ಲಂಚಮುಕ್ತ ಕರ್ನಾಟಕ" ಅಭಿಯಾನ:ರವಿ ಕೃಷ್ಣಾರೆಡ್ಡಿ

ಕಲಘಟಗಿ: "ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷದಿಂದ ರಾಜ್ಯಾದ್ಯಂತ "ಲಂಚಮುಕ್ತ ಕರ್ನಾಟಕ"ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ತಿಳಿಸಿದರು.

ಜನರು ಮಧ್ಯವರ್ತಿಗಳಿಲ್ಲದೇ, ವಿಳಂಬವಿಲ್ಲದೆ ಆಗತ್ಯ ಸೇವೆಗಳನ್ನು ಪಡೆಯುವಂತಾಗ ಬೇಕು.ಸರಕಾರಿ ಕಚೇರಿ ನೌಕರರು ಬ್ಯಾಡ್ಜ್ ಹಾಗೂ ನಾಮಫಲಕವನ್ನು ಹೊಂದಿರ ಬೇಕು ಆ ಮೂಲಕ ಪಾರದರ್ಶಕ ಆಡಳಿತ ನಡೆಯ ಬೇಕು ಎಂದರು.

ಕಲಘಟಗಿ ತಾಲೂಕಾ ಕಚೇರಿಯಲ್ಲಿ‌ ಅವ್ಯವಸ್ಥೆ ಇದೆ ಎಂದು ಆರೋಪಿಸಿದರು.ಕಲಘಟಗಿಯ ಕೆಲ ಸರಕಾರಿ ಕಚೇರಿಗಳಲ್ಲಿ ತಾಲೂಕಿನ ನಾಗರಿಕರಿಗೆ ಕಾನೂನುಬದ್ಧ ಕೆಲಸವನ್ನು ಮಾಡಿಕೊಡದೇ,ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

Edited By : Manjunath H D
Kshetra Samachara

Kshetra Samachara

11/02/2021 04:07 pm

Cinque Terre

36 K

Cinque Terre

4

ಸಂಬಂಧಿತ ಸುದ್ದಿ