ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಧಿಕಾರಿಗಳ ಸಮನ್ವಯ ಕೊರೆತೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ‌, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಸ್ಮಾರ್ಟ್ ಸಿಟಿ ಹಾಗೂ ಸಿ.ಆರ್.ಎಫ್. ರಸ್ತೆ ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಿದರು.

ಗದಗ ರಸ್ತೆಯಿಂದ ಸರ್ವೋದಯ ಸರ್ಕಲ್ ವರೆಗೆ ಸಿ.ಆರ್.ಎಫ್. ಅಡಿ ನಿರ್ಮಿಸಲಾಗುತ್ತಿರುವ ಸಿ.ಸಿ.ರಸ್ತೆ ಕಾಮಗಾರಿ ಸಚಿವರು ವೀಕ್ಷಿಸಿದರು.

ಈ ವೇಳೆ ನಗರ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು, ಮಹಾನಗರ ಪಾಲಿಕೆ ಹಾಗೂ ಹೆದ್ದಾರಿ ಪ್ರಾಧಿಕಾರದೊಡನೆ ಸಮನ್ವಯವಾಗಿ ಕಾರ್ಯನಿರ್ವಹಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ರಸ್ತೆ ಇಕ್ಕೆಳಗಳಲ್ಲಿ ಕುಡಿಯುವ ನೀರಿನ ಸರಬರಾಜು ಪೈಪ್ ಅಳವಡಿಸಲು ಪಾಲಿಕೆಯಿಂದ ಮಂಡಳಿಗೆ 2.5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು. ಮಂಡಳಿಯ ಮುಖ್ಯ ಇಂಜಿನಿಯರ್ ಕೇಶವ್ ಅವರಿಗೆ ದೂರವಾಣಿ ಕರೆ ಮಾಡಿದ ಸಚಿವರು, ತ್ವರಿತವಾಗಿ ಕಡತ ವಿಲೇವಾರಿ ಮಾಡಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ಮಾಡುವಂತೆ ನಿರ್ದೇಶನ ನೀಡಿದರು.

ಅಧಿಕಾರಿಗಳ ಕಾರ್ಯವೈಖರಿ ಅರ್ಥವಾಗುವುದಿಲ್ಲ. ಕೆಳಹಂತದ ಅಧಿಕಾರಿಗಳು ಕಡತದ ಬಗ್ಗೆ ತಿಳಿಸಿಲ್ಲ ಎಂದು ಮುಖ್ಯ ಇಂಜಿನಿಯರ್ ಹೇಳುತ್ತಾರೆ. ನಗರದ ಮುಖ್ಯ ರಸ್ತೆಯನ್ನು ವರ್ಷಾನುಗಟ್ಟಲೆ ನಿರ್ಮಿಸದಿದ್ದರೆ ಹೇಗೆ? ಜನ ಪ್ರತಿನಿಧಿಗಳೇ ಪದೆ ಪದೆ ಬಂದು ಹೇಳಬೇಕೆ? ಅಧಿಕಾರಿಗಳು ಯಾಕಿದ್ದೀರಿ? ಕೇಳಿದಷ್ಟು ಹಣವನ್ನು ನೀಡಲಾಗಿದೆ. ಎಲ್ಲಾ ಸಹಕಾರನ್ನು ನೀಡಲಾಗಿದೆ. ಆದರೂ ಸಮಸ್ಯೆ. ಏನು ಆರ್ಥವಾಗುತ್ತಿಲ್ಲ. ಅಧಿಕಾರಿಗಳಿಗೆ ಬೇರೆ ಕೆಲಸಗಳಿವೆಯೇ? ಸಮಯವಿಲ್ಲವೇ? ಅಧಿಕಾರಿಗಳ ನಡುವೆ ಹೊಂದಿಸಲು ನಾವೇ ಬರಬೇಕೆ? ವೀಕ್ಷಿಸಿದಾಗ ಅಧಿಕಾರಿಗಳಿಗೆ ತಿಳಿಯುವುದಿಲ್ಲವೇ? ಎಂದು ಪ್ರಶ್ನಿಸಿದರು. ಸ್ವಪ್ರೇರಣೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಕೈಯಲ್ಲಿ ನಾವು ಬೈಯಿಸಿಕೊಳ್ಳಬೇಕು. ಇದಕ್ಕೆಲ್ಲಾ ಆಸ್ಪದ ನೀಡದೆ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ಜೆ.ಸಿ.ನಗರ ಹಾಗೂ ಸ್ಟೇಷನ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಲಾಗುತ್ತಿರುವ ರಸ್ತೆ ವೀಕ್ಷಿಸಿದ ಅವರು ತ್ವರಿತವಾಗಿ ಕಾಮಗರಿ ಪೂರ್ಣಗೊಳಿಸುವಂತೆ ಸೂಚಿಸಿದರು. ರಸ್ತೆಯಲ್ಲಿ ನಿರ್ಮಾಣ ಕಾಮಗಾರಿಯ ತ್ಯಾಜ್ಯಗಳನ್ನು ಚೆಲ್ಲುವವರ ವಿರುದ್ಧ ಎಫ್.ಐ.ರ್ ದಾಖಲಿಸಿ. ದಂಡ ವಸೂಲಿ ಮಾಡಿ. ಅನಗತ್ಯವಾಗಿ ತೊಂದರೆ ನೀಡುವವರ ವಿರುದ್ದ ಕ್ರಮಕೈಗೊಳ್ಳಿ. ಚರಂಡಿ, ಯು.ಜಿ.ಡಿ. ಇತರೆ ಅಗತ್ಯ ಸಂಪರ್ಕಗಳನ್ನು ಪೂರ್ಣಗೊಳಿಸಿದ ನಂತರವೇ ರಸ್ತೆ ಕಾಮಗಾರಿ ಕೈಗೊಳ್ಳಿ. ನಿಗದಿತ ಅವಧಿಯಂತೆ ಬರುವ ಮೇ ವೇಳೆಗೆ ರಸ್ತೆ ನಿರ್ಮಾಣವಾಗಬೇಕು.‌ಚರಂಡಿ, ಯು.ಜಿ.ಡಿ. ಇತರೆ ಅಗತ್ಯ ಸಂಪರ್ಕಗಳ ಸಂದರ್ಭದಲ್ಲಿ ಬರುವ ತ್ಯಾಜ್ಯ ಹಾಗೂ ಮಣ್ಣನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಎಂದರು.

Edited By : Manjunath H D
Kshetra Samachara

Kshetra Samachara

25/01/2021 08:23 pm

Cinque Terre

37.49 K

Cinque Terre

13

ಸಂಬಂಧಿತ ಸುದ್ದಿ