ಹುಬ್ಬಳ್ಳಿ: ಲೋಕೋಪಯೋಗಿ ಇಲಾಖೆಯ 40 ಕೋಟಿ ಅನುದಾನದಲ್ಲಿ, ಹುಬ್ಬಳ್ಳಿ ನಗರದ ಎಲ್ಲಾ ಒಳರಸ್ತೆಗಳ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ 35 ವಾರ್ಡ್ ಗೆ 10 ಕೋಟಿ ಅನುದಾನ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ , ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಶ್ರೇಯಾ ನಗರದಲ್ಲಿ ವಾರ್ಡ್ ನಂ 35ರ ಒಳ ರಸ್ತೆ್ಳಗಳ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಹಾನಗರ ಪಾಲಿಕೆಯ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಮನಒಲಿಸಿ, ಹುಬ್ಬಳ್ಳಿ ನಗರದ ಒಳರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 40 ಕೋಟಿ ಅನುದಾನ ಪಡೆಯಲಾಗಿತ್ತು. ಕೊರೊನಾ ಲಾಕ್ ಡೌನ್ ನಿಂದಾಗಿ ಹಣಕಾಸು ಇಲಾಖೆ ಅನುದಾನವನ್ನು ತಡೆಹಿಡಿದಿತ್ತು. ನಂತರ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಕಾಮಗಾರಿ ಮುಂದುವರೆಸಲು ಅನುಮೋದನೆ ಪಡೆಯಲಾಗಿದೆ.
ವಾರ್ಡ್ 35 ಹಾಗೂ 36ರ ಶ್ರೇಯಾ ಪಾರ್ಕ್, 10 ಅವೆನ್ಯೂ ನಗರ, ಲಕ್ಷ್ಮೀ ನಗರ, ಚೇತನಾ ಕಾಲೋನಿ ಸೇರಿದಂತೆ ಎಲ್ಲಾ ನಗರಗಳ ಒಳರಸ್ತೆಗಳ ಡಾಂಬರೀಕರಣ ಮಾಡಲಾಗುವುದು. ರಸ್ತೆಯ ಗುಣಮಟ್ಟ ಉತ್ತಮವಾಗಿರಲಿದ್ದು, 15 ವರ್ಷಗಳ ಕಾಲ ಜನರಿಗೆ ತೊಂದರೆ ಇರುವುದಿಲ್ಲ. ಈ ಭಾಗದಲ್ಲಿ ವಿದ್ಯಾನಗರದಿಂದ ತೋಳನಕೆರೆ ವರೆಗೆ 44 ಕೋಟಿ ವೆಚ್ಚದಲ್ಲಿ ಟೆಂಡ್ಯರ್ ಶೂರ್ ಮಾದರಿ ರಸ್ತೆ ನಿರ್ಮಿಸಲಾಗಿದೆ. ಸ್ಮಾರ್ಟಿ ಸಿಟಿ ಯೋಜನೆಯಡಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಾನವನ್ನು ತೋಳನಕೆರೆಯಲ್ಲಿ ನಿರ್ಮಿಸಲಾಗುತ್ತಿದೆ. 24*7 ನೀರು ಸರಬರಾಜು ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದೆ. ಎಲ್.ಎನ್.ಟಿ ಕಂಪನಿಯವರು ಸಮೀಕ್ಷೆ ಆರಂಭಿಸಿದ್ದಾರೆ. ಮಾರ್ಚ್ ನಂತರ ಕಾಮಗಾರಿ ಶುರುವಾಗುವುದು. ಎರೆಡು ವರ್ಷಗಳ ಕಡಿಮೆ ಅವಧಿಯಲ್ಲಿ ಯೋಜನೆ ಅನುಷ್ಠಾನ ಗೊಳಿಸಲಾಗುವದು. ನಗರ ಅರಣ್ಣೀಕರಣ ಕಲ್ಪನೆಯೊಂದಿಗೆ ಅಕ್ಷಯ ಪಾರ್ಕ್ ನಲ್ಲಿ ಮಾದರಿ ಉದ್ಯಾನವನ್ನು ನಿರ್ಮಿಸಲಾಗುವುದು ಎಂದರು.
Kshetra Samachara
24/01/2021 07:43 pm