ಧಾರವಾಡ: ಸರ್ಕಾರ ಎಂದ ಮೇಲೆ ಸಚಿವ ಸ್ಥಾನದ ಆಕಾಂಕ್ಷಿಗಳೂ ಇರುತ್ತಾರೆ, ಅವರನ್ನು ಸಿಎಂ ಸಮಾಧಾನ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದ್ದಾಗ ಹೀಗೆಲ್ಲ ಕೆಲವರು ಮಾತನಾಡುತ್ತಾರೆ. ಆಕಾಂಕ್ಷಿಗಳು ಮಾತನಾಡುತ್ತಾರೆ ಬಿಎಸ್ವೈ ಸಮಾಧಾನ ಮಾಡುತ್ತಾರೆ ಎಂದರು.
ಧಾರವಾಡ ಬೈಪಾಸ್ ರಸ್ತೆ ಕಾಮಗಾರಿ ಕುರಿತು ಪ್ರತಿಕ್ರಿಯಿಸಿದ ಜೋಶಿ, 1200 ಕೋಟಿ ವೆಚ್ಚದಲ್ಲಿ 6 ಪಥ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಹಲವು ಸಮಸ್ಯೆಗಳು ಇದ್ದವು, ಸಮಸ್ಯೆ ಬಗೆಹರಿಸಿ ಡಿಪಿಆರ್ ತಯಾರಾಗಿದೆ. ಜ.27 ರಂದು ನ್ಯಾಷನಲ್ ಹೈವೆ ಅಥಾರಿಟಿ ಹಾಗೂ ಡೈರೆಕ್ಟರ್ ಜನರಲ್ ಸಭೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ರಸ್ತೆ ಹಾಗೂ ಭೂಮಿ ಹಸ್ತಾಂತರ ಮಾಡಿದ್ರೆ ಕೆಲಸ ಆರಂಭ ಮಾಡಲಾಗುತ್ತೆ. 60 ದಿನಗಳಲ್ಲಿ 6 ಪಥ ರಸ್ತೆ ಕಾಮಗಾರಿ ಆರಂಭ ಮಾಡಲಾಗುತ್ತದೆ ಎಂದರು.
Kshetra Samachara
16/01/2021 10:05 am