ಹುಬ್ಬಳ್ಳಿ: ಅವಳಿನಗರದ ಅಭಿವೃದ್ಧಿ ಕನಸನ್ನು ಹೊತ್ತಿರುವ ಆ ಇಲಾಖೆಯ ಬಗ್ಗೆ ರಾಜ್ಯ ಸರ್ಕಾರ ನಿಷ್ಕಾಳಜಿ ತೋರುತ್ತಿದೆ.ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡಬೇಕಾದ ಹಣವನ್ನು ಬಿಡುಗಡೆ ಮಾಡದೇ ಇರುವುದು ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ.
ಕೋಟ್ಯಾಂತರ ರೂಪಾಯಿ ಬಾಕಿ ಹಣದ ಬಿಡುಗಡೆಗಾಗಿ ಎದುರು ನೋಡುತ್ತಿದೆ.ಹಾಗಿದ್ದರೇ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಾದ ಹಣ ಆದ್ರೂ ಯಾವುದು ಅಂತೀರಾ ಈ ಸ್ಟೋರಿ ನೋಡಿ...
ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಹಳೇಯ ಪಿಂಚಣಿ ಬಾಕಿ ಹಣ ಇದುವರೆಗೂ ಬಂದಿಲ್ಲ.
ಸುಮಾರು ಐವತ್ತು ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ ತಾಂತ್ರಿಕ ತೊಂದರೆ ನೆಪ ಹೇಳಿ ಸುಮಾರು ಮೂರು ವರ್ಷದಿಂದ ಪಿಂಚಣಿ ಹಣವನ್ನು ಬಿಡುಗಡೆ ಮಾಡಿಲ್ಲ.ಹೌದು ಸುಮಾರು ಐವತ್ತು ಕೋಟಿ ಪಿಂಚಣಿ ಬಾಕಿ ಹಣ ಮಹಾನಗರ ಪಾಲಿಕೆಗೆ ಸರ್ಕಾರ ಬಿಡುಗಡೆ ಮಾಡಬೇಕಿದೆ.ಆದರೂ ಕೂಡ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
ಪಿಂಚಣಿ ಮೊತ್ತ ಒಟ್ಟು 121 ಕೋಟಿಗೆ ತಲುಪಿತ್ತು.ಸರ್ಕಾರ ಪಿಂಚಣಿ ಹಣವನ್ನು ಬಿಡುಗಡೆ ಮಾಡದಿದ್ದರೂ ಪಾಲಿಕೆ ತನ್ನ ಸಾಮಾನ್ಯ ನಿಧಿ ಅಡಿಯಲ್ಲಿ ಪಾಲಿಕೆ ನೌಕರರಿಗೆ ಪಿಂಚಣಿ ನೀಡುತ್ತಾ ಬಂದಿತ್ತು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರಯತ್ನದಿಂದ 2019ರಲ್ಲಿ 26 ಕೋಟಿ ಬಿಡುಗಡೆ ಆಗಿತ್ತು.
ಅಲ್ಲದೇ ಕೊರೋನಾ ಸಂಕಷ್ಟದ ನಡುವೆಯೂ ಎರಡನೇ ಕಂತಿನ ಮೊತ್ತ 26 ಕೋಟಿ ಪಾಲಿಕೆ ಹರಿದುಬಂದಿತು.ಒಟ್ಟು 52 ಕೋಟಿ ಹಣದಲ್ಲಿ ಬಹುಪಾಲು ಹಣವನ್ನು ಗುತ್ತಿಗೆದಾರರ ಬಿಲ್ ಪಾವತಿಗೆ ನೀಡಿತ್ತು.
ಒಂದಿಷ್ಟು ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಿತ್ತು.ಈಗ ಐವತ್ತು ಕೋಟಿ ಪಿಂಚಣಿ ಹಣ ಬಾಕಿ ಇರುವುದರಿಂದ ಪಿಂಚಣಿ ನೀಡಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲು ಸರ್ಕಾರದ ಹಣ ಬಿಡುಗಡೆ ದಾರಿಯನ್ನು ಕಾಯುವಂತಾಗಿದೆ.ಆದರೆ ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡುತ್ತೇವೆ ಎಂಬುವಂತ ಭರವಸೆಯನ್ನು ನೀಡುತ್ತಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ನಿಷ್ಕಾಳಜಿಯಿಂದ ಅವಳಿನಗರದ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬೀಳುವಂತೆ ಕಾಣುತ್ತಿದೆ. ಕೂಡಲೇ ಸರ್ಕಾರ ಎಚ್ಚೇತ್ತುಕೊಂಡು ಮಹಾನಗರ ಪಾಲಿಕೆಗೆ ನೀಡಬೇಕಾದ ಐವತ್ತು ಕೋಟಿ ಪಿಂಚಣಿ ಹಣವನ್ನು ಬಿಡುಗಡೆ ಮಾಡಿ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
Kshetra Samachara
07/01/2021 08:31 pm