ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆಗೆ ರೈತರ ಬದುಕೇ ಮೂರಾಬಟ್ಟೆ:ಅಧಿಕಾರಕ್ಕಾಗಿ ಹೊರಟಿದೆ ಜನಸ್ವರಾಜ್ ಯಾತ್ರೆ..!

ಪಬ್ಲಿಕ್ ನೆಕ್ಸ್ಟ್ ವಿಶೇಷ...

ಹುಬ್ಬಳ್ಳಿ:ನಮಸ್ಕಾರ ಸಹೃದಯಿ ಜನತೆಗೆ... ನೋಡ್ರಿ ನಮಗೆ ರಾಜಕೀಯ ಬೇಕಿರುವುದು ನಮ್ಮ ದೇಶದ ಹಾಗೂ ನಮ್ಮ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ. ಆದರೆ ನಮ್ಮ ಜನನಾಯಕರಿಗೆ ಮಾತ್ರ ಯಾವುದೇ ಸಾರ್ವಜನಿಕ ಸಮಸ್ಯೆಗಳು ಬೇಕಿಲ್ಲ. ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಎಲ್ಲೆಂದರಲ್ಲಿ ಬೆಳೆ ಹಾನಿಯಾಗಿದೆ. ಎಷ್ಟೋ ಸಾವು ನೋವು ಸಂಭವಿಸಿವೆ. ಆದರೂ ಕೂಡ ಯಾವುದೇ ಕಾಳಜಿಯಿಲ್ಲದೇ ಜನಸ್ವರಾಜ ಯಾತ್ರೆಯ ಮೂಲಕ ಅಧಿಕಾರಕ್ಕಾಗಿ ಜನಪ್ರತಿನಿಧಿಗಳು ಹಪಹಪಿಸುತ್ತಿದ್ದಾರೆ.

ಹೌದು... ರಾಜ್ಯವೇ ವರುಣನ ಅಬ್ಬರಕ್ಕೆ ನಲುಗಿ ಹೋಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ವಿಧಾನ ಪರಿಷತ್ ಚುನಾವಣೆ ಅಧಿಕಾರದ ಆಸೆಯಿಂದ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಜನಸ್ವರಾಜ ಸಮಾವೇಶಕ್ಕೆ ಮುಂದಾಗುತ್ತಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ, ಅಳ್ನಾವರ, ಕುಂದಗೋಳ ಸೇರಿದಂತೆ ಬಹುತೇಕ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ. ಆದರೆ ಜನನಾಯಕರಿಗೆ ಮಾತ್ರ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವರಿಗೆ ಬೇಕಿರುವುದು ಜನರನ್ನು ಆಳುವ ಅಧಿಕಾರವೇ ಹೊರತು ಜನರ ಅಳಲು ಅಲ್ಲ. ಆದರೆ ಮಾಜಿ ಸಿಎಂ ಮಾತ್ರ ಈ ಬಗ್ಗೆ ಹರಿಕೆ ಉತ್ತರ ನೀಡುತ್ತಾರೆ.

ಸಾವಿರಾರು ಎಕರೆ ಬೆಳೆ ಹಾಳಾಗಿವೆ. ನೂರಾರು ಮನೆಗಳು ನೆಲಕ್ಕೆ ಉರುಳಿ ಹೋಗಿವೆ. ಹೀಗಿದ್ದರೂ ಕೂಡ ಜನಪ್ರತಿನಿಧಿಗಳಿಗೆ ವಿಧಾನ ಪರಿಷತ್ ಚುನಾವಣೆಯೇ ಅವಶ್ಯಕತೆ ಹೆಚ್ಚಿದೆ. ಚುನಾವಣೆಗೆ ಮುನ್ನ ಮತದಾರ ಬೇಕು ಆದರೆ ಚುನಾವಣೆ ಮುಗಿದ ಮೇಲೆ ಮತದಾರನ ಸ್ಥಿತಿ ಜನಪ್ರತಿನಿಧಿಯಿಂದ ಮತ್ತಷ್ಟು ದೂರವಾಗುವುದು ಖಂಡಿತ.

ಇನ್ನೂ ವಾಣಿಜ್ಯನಗರಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಪೂರ್ವಭಾವಿಯಾಗಿ ಜನ ಸ್ವರಾಜ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಪ್ರಮುಖರ ನಾಲ್ಕು ತಂಡಗಳಾಗಿ ಸಮಾವೇಶ ನಡೆಯುತ್ತಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶ್ರೀರಾಮುಲು, ಗೋವಿಂದ ಕಾರಜೋಳ, ತೇಜಸ್ವಿ ಅನಂತಮೂರ್ತಿ, ಎಂ.ಬಿ.ನಂದೀಶ ಉಪಸ್ಥಿತಿಯಲ್ಲಿ ಸಮಾವೇಶ ನಡೆಯುತ್ತಿದೆ. ಆದರೆ ಜನನಾಯಕರಿಗೆ ಜನರ ಸಮಸ್ಯೆ ಮಾತ್ರ ಕಾಣುತ್ತಿಲ್ಲ.

Edited By : Manjunath H D
Kshetra Samachara

Kshetra Samachara

19/11/2021 10:50 am

Cinque Terre

47.34 K

Cinque Terre

11

ಸಂಬಂಧಿತ ಸುದ್ದಿ