ಕುಂದಗೋಳ : ನಮಸ್ಕಾರಿ ರೀ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೀವೂ ಅತಿವೃಷ್ಟಿ ಪರಿಣಾಮ ಪ್ರತಿ ವರ್ಷ ಹಾಳಾಗುವ ಕಣೋಜ ಹಳ್ಳಕ್ಕೆ ಶಾಶ್ವತ ಪರಿಹಾರ ಮಾಡ್ತಾ ಇಲ್ಲಾ, ಇನ್ನೂ ಜನಪ್ರತಿನಿಧಿಗಳಂತೂ ಈ ಕಡೆ ತಲೆ ಹಾಕಿಲ್ಲಾ.
ಈ ಪರಿಣಾಮ ಪಾಪಾ ಬೇಸಾಯ ನಂಬಿದ ರೈತರು ತಮ್ಮ ತಮ್ಮ ಹೊಲದಲ್ಲಿ ಅತಿವೃಷ್ಟಿ ಸುಳಿಗೆ ಸಿಲುಕಿ ಉಳಿದಂತ ಬೆಳೆ ಒಕ್ಕಲು ಮಾಡಲು ಟ್ರ್ಯಾಕ್ಟರ್, ಚಕ್ಕಡಿ, ಯಂತ್ರ ತೆಗೆದುಕೊಂಡು ಹೊಲಕ್ಕೆ ಹೋಗಲು ನೋಡ್ರಿಲ್ಲೇ ಊರಿ ಬಿಸಿಲಲ್ಲಿ ಅವರ ಜಮೀನಿಗೆ ಅವ್ರೇ ರಸ್ತೆ ಮಾಡ್ತಾ ಇದ್ದಾರೆ.
ರೀ.. ಅಧಿಕಾರಿಗಳೇ ಕುಂದಗೋಳದಿಂದ ಕಡಪಟ್ಟಿಗೆ ಸಂಪರ್ಕ ಕಲ್ಪಿಸುವ ಈ ಕಣೋಜ ಹಳ್ಳದ ರಸ್ತೆ ಅರ್ಧ ಕೊಚ್ಚಿ ಹೋಗಿದ್ದು, ಅದಕ್ಕೆ ಸಂಪರ್ಕ ಕಲ್ಪಿಸುವ ಸುತ್ತಲಿನ ಜಮೀನುಗಳ ರಸ್ತೆ ಸಂಪೂರ್ಣ ಹಾಳಾಗಿವೆ, ಹೀಗಾಗಿ ರೈತರು ನಿತ್ಯ ಕೃಷಿ ಚಟುವಟಿಕೆ ಕೈಗೊಳ್ಳಲು ದಾರಿ ಇಲ್ಲದೆ ಅವರೇ ಒಟ್ಟಾಗಿ ಈ ರೀತಿ ಉರಿ ಬಿಸಿಲಲ್ಲಿ ತಾವೇ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸರಣಿ ವರದಿ ಪ್ರಕಟಿಸಿ ನಿಮ್ಮ ಗಮನಕ್ಕೆ ಸಮಸ್ಯೆ ತಂದರೂ ನೀವೂ ಕ್ರಮ ಕೈಗೊಳ್ಳದೆ ಸುಮ್ಮನಿರುವ ಕಾರಣ ಸದ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಗಮನಕ್ಕೂ ಈ ವಿಷಯವನ್ನು ರೈತರು ತೆರೆದಿಟ್ಟಿದ್ದಾರೆ.
ಒಟ್ಟಾರೆ ದೇಶದ ಬೆನ್ನೆಲುಬು ರೈತ. ಇದೀಗ ಆತನ ಜಮೀನಿಗೆ ದಾರಿ ನಿರ್ಮಾಣ ಮಾಡದಂತಹ ಲೋಕೋಪಯೋಗಿ ಇಲಾಖೆ ವಿರುದ್ಧ ರೈತರ ದಿಕ್ಕಾರ ಮೊಳಗುತ್ತಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
29/09/2022 03:13 pm