ಕುಂದಗೋಳ : ಗ್ರಾಮಗಳ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳು ಕೈಗೊಂಡು ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವತಃ ಅಧಿಕಾರಿಗಳೇ ಲಂಚ ಪಡೆದ ಆರೋಪ ಕೇಳಿ ಬಂದಿದೆ.
ಹೌದು..ಕುಂದಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ನಡೆದ ತಹಶೀಲ್ದಾರ ನೇತೃತ್ವದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಾರಾಯಿ ಮಾರಾಟ ಮಾಡುವವರಿಂದ 25 ಸಾವಿರ ಲಂಚ ಪಡೆದೂ, ಕೇಸ್ ದಾಖಲಿಸಿ ಬಡವನನ್ನು ಕೋರ್ಟ್'ಗೆ ಓಡಾಡುವಂತೆ ಮಾಡಿದ್ದಾರೆ. ಆ ಕೇಸ್ ಹಿಂಪಡೆಯರಿ ಎಂದು ಗ್ರಾಮಸ್ಥರು ವೇದಿಕೆ ಏರಿ ಅಬಕಾರಿ ಇನ್ಸಪೆಕ್ಟರ್ ಪ್ರೇಮಸಿಂಗ್ ಲಮಾಣಿ ವಿರುದ್ಧ ಆರ್ಭಟಿಸಿದರು.
ಬಳಿಕ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಸಮಸ್ಯೆ ತಿಳಿಸಿಗೊಳಿಸಲು ಮುಂದಾದಾಗ ಗ್ರಾಮಸ್ಥರು ನಮ್ಮ ಗ್ರಾಮ ಸಾರಾಯಿ ಮಾರಾಟ ಮುಕ್ತ ಆಗಬೇಕು. ಇಲ್ಲಿ ಕೆಲವರಿಗೆ ಮುಕ್ತವಾಗಿ ಸಾರಾಯಿ ಮಾರಲು ಕೈ ಬಿಡಲಾಗಿದೆ. ಹೀಗಾ ಆದ್ರೆ ನಾನೂ ನಾನು ಮನೆಗೆ ಮನೆಗೆ ಹೋಗಿ ಸಾರಾಯಿ ಮಾರುತ್ತೇನೆ ಹುಷಾರ್ ವ್ಯಕ್ತಿಯೋರ್ವ ಎಚ್ಚರಿಸಿದ್ದಾನೆ. ಕೂಡಲೇ ಎಲ್ಲ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ ಎಂದರು.
ಪರಿಸ್ಥಿತಿ ಉದ್ವಿಗ್ನಗೊಂಡಾಗ ಅಬಕಾರಿ ಇನ್ಸಪೆಕ್ಟರ್ ಎಲ್ಲ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಿ ಎಂದಿದ್ದಾರೆ. ಬಳಿಕ ಪಿ.ಆರ್.ಡಿ ಮುಖ್ಯಾಧಿಕಾರಿ ರಟ್ಟಿಗೇರಿ ಗುಡಗೇರಿ ರಸ್ತೆ ಅಭಿವೃದ್ಧಿ ಶೀಘ್ರ ನಡೆಯಲಿದೆ ಎಂದರು.
ಇನ್ನೂಳಿದಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ ಗ್ರಾಮ ಪರಿಶೀಲನೆ ನಡೆಸಿ ಚರಂಡಿ ಸ್ವಚ್ಛತೆ, ರಸ್ತೆ ಅಭಿವೃದ್ಧಿ, ನೀರಿನ ಸಂಪರ್ಕ, ಸೇರಿದಂತೆ ಇತರೆ ಅನುಕೂಲ ಕಲ್ಪಿಸಲು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ಕೇಂದ್ರ ಸ್ಥಾನದ ಎಲ್ಲ ಅಧಿಕಾರಿಗಳು ತಮ್ಮ ವರದಿ ಅಭಿವೃದ್ಧಿ ಜನರಿಗೆ ತಿಳಿಸಿದರು.
Kshetra Samachara
20/09/2022 04:46 pm