ಅಣ್ಣಿಗೇರಿ: ತಾಲ್ಲೂಕು ಆಡಳಿತ ವರ್ಗವೇ ನಮ್ಮ ಗ್ರಾಮಕ್ಕೆ ಬರುತ್ತದೆ ಎಂಬ ಆಸೆ ಇಟ್ಟುಕೊಂಡಿದ್ದ ಬೆನ್ನೂರು ಗ್ರಾಮದ ಜನತೆಗೆ ನಿರಾಸೆಯಾಗಿದೆ ಎಂದರೆ ತಪ್ಪಾಗಲಾರದು.
ಹೌದು ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆಯ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಇದು ಹೆಸರಿಗೆ ಮಾತ್ರ ಸೀಮಿತವಾಗಿದೆ ಎಂದು ಅಲ್ಲಿನ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಗ್ರಾಮದ ಸಾರ್ವಜನಿಕರು ನಮ್ಮ ಕಷ್ಟಗಳನ್ನು ಅಧಿಕಾರಿಗಳ ಹತ್ತಿರ ಹೇಳಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದುಕೊಂಡಿದ್ದ ಜನರಿಗೆ ಅಧಿಕಾರಿಗಳೇ ಇಲ್ಲದೆ ಇರುವುದರಿಂದ ಹೆಸರಿಗೆ ಮಾತ್ರ ಜಿಲ್ಲಾಧಿಕಾರಿಗಳ ನಡೆ ಹಳೇ ಕಡೆ ಕಾರ್ಯಕ್ರಮ ನಡೆಯಿತು ಎಂದು ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ.
ಅಣ್ಣಿಗೇರಿ ತಾಲೂಕಿಗೆ 2 ತಿಂಗಳ ಮೇಲಾದರೂ ತಹಶೀಲ್ದಾರ್ ಇಲ್ಲದಂತಾಗಿದೆ. ನವಲಗುಂದ ತಾಲೂಕಿಗೆ ಇದ್ದ ತಹಶೀಲ್ದಾರ್ ಇಲ್ಲಿ ಚಾರ್ಜ್ ಇರುವುದರಿಂದ ಎರಡು ತಾಲೂಕು ನಿಭಾಯಿಸುವುದು ಅವರಿಗೂ ಕಷ್ಟ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.
ಇನ್ನೂ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆಯ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಕೆಲವು ಇಲಾಖೆ ಅಧಿಕಾರಿಗಳು ಬರದೇ ಇರುವುದು ಹಾಗೂ ಕೆಲವು ಅಧಿಕಾರಿಗಳು ಮಧ್ಯಾಹ್ನವೇ ಅಲ್ಲಿಂದ ಜಾಗ ಖಾಲಿ ಮಾಡಿದ್ದು ಗ್ರಾಮಸ್ಥರಿಗೆ ಬೇಸರ ಉಂಟುಮಾಡಿದೆ.
ಒಟ್ಟಾರೆಯಾಗಿ ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಹೆಸರಿಗೆ ಮಾತ್ರ ಸೀಮಿತವಾಗಿದೆ
Kshetra Samachara
18/09/2022 03:08 pm