ಕುಂದಗೋಳ: ಸರ್ಕಾರ ಕೊಡುವ ಯೋಜನೆ ಸದುಪಯೋಗ ಸರ್ವರ ಹಕ್ಕು. ಅದರಲ್ಲೂ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳು ಸಿಗಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದ್ದಾರೆ.
ಅವರು ರೈತಾಪಿ ಜಾನುವಾರುಗಳ ಅನುಕೂಲಕ್ಕಾಗಿ ಪಶು ವೈದ್ಯಕೀಯ ಆಸ್ಪತ್ರೆ ಪಶುಪಾಲನಾ ಇಲಾಖೆಯಿಂದ ಮಂಜೂರಾದ ಜಾನುವಾರು ನೆಲಹಾಸು (ಮ್ಯಾಟ್) ವಿತರಣೆ ಮಾಡಿ ಮಾತನಾಡಿ, ಸರ್ಕಾರ ಸಹಾಯಧನದ ಅಡಿಯಲ್ಲಿ ನೀಡಿದ ಯೋಜನೆ ಅರ್ಹರು ಪಾಲಾಗಿದೆ ಎಂದರು.
ಬಳಿಕ ಪಶು ವೈದ್ಯಾಧಿಕಾರಿ ಡಾ.ಬಿ.ಬಿ.ಅವಾರಿ ಮಾತನಾಡಿ ಇಲಾಖೆ ಕಾರ್ಯವೈಖರಿ ವಿವರಿಸಿದರು.
ಕಾರ್ಯಕ್ರಮದ ನಂತರ ಶಾಸಕಿ ಕುಸುಮಾವತಿ ಶಿವಳ್ಳಿ ಕುಂದಗೋಳ ಮತಕ್ಷೇತ್ರದ ಚಾಕಲಬ್ಬಿ, ಹರ್ಲಾಪೂರ, ಸುಲ್ತಾನಪುರ ಸೇರಿದಂತೆ ಕುಂದಗೋಳ ತಾಲೂಕಿನ ವಿವಿಧ ಭಾಗಗಳಿಗೆ ತೆರಳಿ ಎರಡನೇ ಸುತ್ತು ಅಧಿಕಾರಿಗಳ ಸಮ್ಮುಖದಲ್ಲಿ ನೆರೆ ಹಾನಿ, ಬೆಳೆ ಹಾನಿ ವೀಕ್ಷಿಸಿ ಮನೆ ಬಿದ್ದವರಿಗೆ ಪರಿಹಾರದ ಭರವಸೆ ನೀಡಿ ಧೈರ್ಯ ತುಂಬಿದರು.
Kshetra Samachara
12/09/2022 12:56 pm