ಹುಬ್ಬಳ್ಳಿ: ಆ ಪಾಲಿಕೆ ಕಳೆದವರ್ಷವಷ್ಟೆ ನಗರದ ಸ್ವಚ್ಚತೆಗೋಸ್ಕರ 100 ಕ್ಕೂ ಹೆಚ್ಚು ಟಿಪ್ಪರ್ ಗಳನ್ನು ಖರೀದಿ ಮಾಡಿತ್ತು. ಆದರೆ ಅವೆಲ್ಲಾ ಸರಿಯಾಗೆ ಕೆಲಸ ಮಾಡುವಾಗ, ಮತ್ತೆ 50 ಕ್ಕೂ ಹೆಚ್ಚು ವಾಹನಗಳ ಖರೀದಿಗೆ ಪಾಲಿಕೆ ಮುಂದಾಗಿದ್ದು, ಕಮೀಷನ್ ದುರಾಸೆ ಎನ್ನುವ ಅನುಮಾನ ಮೂಡುತ್ತಿದೆ. ಹಾಗಿದ್ದರೆ ಏನ್ ಆ ಸ್ಟೋರಿ ಅಂತೀರಾ ತೋರಸ್ತೀವಿ ನೋಡಿ....
ಹೌದು...ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ. ಹೀಗಾಗೇ ಇಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಮನೆ ಮನೆಗೆ ಹೋಗಿ ತ್ಯಾಜ್ಯವನ್ನು ತೆಗೆದುಕೊಂಡು ಬರಲು ಪಾಲಿಕೆ ಕಳೆದೊಂದು ವರ್ಷದ ಹಿಂದೆಯೇ 193 ಆಟೋ ಟಿಪ್ಪರ್,79 ಟ್ರ್ಯಾಕ್ಟರ್ ಗಳು ಸೇರಿದಂರೆ ವಿವಿಧ ರೀತಿಯ ಸಲಕರಣೆಗಳನ್ನು ಖರೀದಿ ಮಾಡಲಾಗಿತ್ತು. ಅವಾಗಲೇ ಕಮೀಷನ್ ಆಸಗೆ ಹೆಚ್ಚಿನ ಮೊತ್ತವನ್ನು ಬಿಲ್ ನಲ್ಲಿ ಹಚ್ಚಲಾಗಿದೆ ಎನ್ನುವ ಅರೋಪ ಕೇಳಿ ಬಂದಿತ್ತು. ಈ ಮಧ್ಯೆ ಮತ್ತೆ ಪಾಲಿಕೆ ಆಟೋ ಟಿಪ್ಪರ್ ಖರೀದಿಗೆ ಮುಂದಾಗಿರುವುದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಹೊಸದಾಗಿ ಬಂದಿರುವ ಪಾಲಿಕೆ ಅಯುಕ್ತರು 32 ಆಟೋ ಟಿಪ್ಪರ್ 12 ಕ್ಕೂ ಹೆಚ್ಚು ಟಿಪ್ಪರ್ ಖರೀದಿಗೆ ಮುಂದಾಗಿದ್ದಾರೆ. ಇದೇ ವಿಷಯ ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನೂ ಕಳೆದ ವರ್ಷ ಖರೀದಿ ಮಾಡಿದ್ದ 255 ತಳ್ಳುವ ಗಾಡಿ, 250 ಕೈ ಬಂಡಿ 2 ಕಾಂಪ್ಯಾಕ್ಟರ್, 2 ಜೆಸಿಬಿ ಖರೀದಿಯಲ್ಲೂ ಕಮೀಷನ್ ವಾಸನೆ ವ್ಯಾಪಕವಾಗಿ ಹರಡಿತ್ತು. ಒನ್ ಟು ಡಬಲ್ ಬಿಲ್ ಹಚ್ಚಿ ಖರೀದಿ ಮಾಡಿದ್ದಾರೆ ಅಂತ ಸ್ವತಃ ಕಾರ್ಪೋರೇಟರ್ ಗಳೇ ಆರೋಪಿಸಿದ್ದರು. ಈ ಮಧ್ಯೆ ಅವುಗಳೆಲ್ಲಾ ಸರಿಯಾಗಿ ಕೆಲಸ ಮಾಡುವಾಗ ಮತ್ತೇ ಖರೀದಿಗೆ ಮುಂದಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಹೆಸ್ಕಾಂಗೆ ಕಟ್ಟಬೇಕಾದ 45 ಕೋಟಿ ಹಣ ವಿದ್ಯುತ್ ಬಿಲ್ ಕಟ್ಟಲು ಪಾಲಿಕೆ ಬಳಿ ಹಣವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆಯುತ್ತದೆ. ಆದರೆ ಏನಾದರು ಖರೀದಿ ಅಂದರೆ ಸಾಕು ಅದೆಲ್ಲಿಂದ ಹಣ ಬರುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ಪಾಲಿಕೆ ಆಯುಕ್ತರನ್ನು ಕೇಳಿದರೆ. ನಗರ ಬೆಳೆದ ಹಾಗೆ ತ್ಯಾಜ್ಯ ವಿಲೇವಾರಿ ಜಾಸ್ತಿಯಾಗುತ್ತಿದ್ದು, ಅದನ್ನು ಸರಿದೂಗಿಸಲು ಹೊಸ ವಾಹನ ಖರೀದಿ ಮಾಡುತ್ತಿದ್ದೆವೆ ಎನ್ನುತ್ತಾರೆ..
Kshetra Samachara
06/02/2022 02:10 pm