ಅಳ್ನಾವರ: ತಾಲೂಕಿನ ಬೆನಚಿ ಗ್ರಾಮ ಪಂಚಾಯಿತಿ ಯನ್ನು 2020-21 ನೇ ಸಾಲಿನ "ಗಾಂಧಿ ಗ್ರಾಮ ಪುರಸ್ಕಾರ"ಕ್ಕೆ ಆಯ್ಕೆ ಮಾಡಲಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂದೀಪ ಭಗವಂತ ಪಾಟೀಲ ಮಾತನಾಡಿ ಬೆನಚಿ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಲು ಪಂಚಾಯಿತಿ ವ್ಯಾಪ್ತಿಯ ಬೆನಚಿ, ಕಿವಡೆಬೈಲ್,ಡೋರಿ, ದೊಪೇನಟ್ಟಿ ಗ್ರಾಮದ ಸಮಸ್ತ ನಾಗರಿಕರ ಸಹಕಾರದಿಂದ ಸಾಧ್ಯವಾಗಿದೆ.
ನಾವು ಚುನಾಯಿತಗೊಂಡು ಕೇವಲ ಎಂಟು ತಿಂಗಳಲ್ಲಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ನಮಗೆಲ್ಲ ಅತೀವ ಸಂತಸ ತಂದಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮ ಗಳಲ್ಲಿ ಕುಡಿಯುವ ನೀರು,ಬೀದಿ ದೀಪ,ಚರಂಡಿ,ಸ್ವಚ್ಛತೆ ಹೀಗೆ ಅನೇಕ ಉದಯೋನ್ಮುಖ ಕಾರ್ಯಗಳಿಗೆ ಮೆಚ್ಚಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದ್ದು,ಇದರಿಂದ ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಪೂರೈಸಲು ಮನ ಬಯಸುತ್ತಿದೆ ಎಂದು ಪಂಚಾಯಿತಿ ಅಧ್ಯಕ್ಷರಾದ ಸಂದೀಪ ಪಾಟೀಲ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಗಾಂಧಿ ಪುರಸ್ಕಾರ ದೊರೆಯಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು,ಸರ್ವ ಸದಸ್ಯರು,ಗ್ರಾಮ ಪಂಚಾಯಿತಿ ಸಿಬ್ಬಂದಿ,ವಿಶೇಷವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಕೆಂಚೆನ್ನವರ ಅವರ ಸಹಕಾರ ಕಾರಣವಾಗಿದೆ ಎಂದರು.
Kshetra Samachara
03/10/2021 11:40 am